ಬೆಂಗಳೂರು : ಬೆಲೆ ಏರಿಕೆ ಜನರಿಗೆ ನಿತ್ಯ ತ್ರಾಸಾಗಿ ಪರಿಣಮಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಖಾರಗಳ ತೆರಿಗೆ ನೀತಿ, ಬೆಲೆ ಏರಿಕೆ, ಹಣದುಬ್ಬರ ಸಾಮಾನ್ಯ ಜನರ ಪಾಲಿಗೆ ಸಂಕಷ್ಟವಾಗಿ ಪರಿಣಮಿಸಿದೆ.
ಹೌದು, ಬೆಂಗಳೂರು ಜನರಿಗೆ ಮತ್ತೊಂದು ದರ ಏರಿಕೆ ಬಿಸಿ ತಟ್ಟಿದೆ. ನಾಳೆಯಿಂದ ಆಟೋ ಪ್ರಯಾಣಿಕರಿಗೆ ದುಬಾರಿ ಬಿಸಿ ಮುಟ್ಟಲಿದೆ. ಆಗಸ್ಟ್ 1 ರಿಂದ ಆಟೋ ಪ್ರಯಾಣ ದರ ಏರಿಕೆಯಾಗುತ್ತಿದೆ. ಆಟೋ ಪ್ರಯಾಣ ದರ ಏರಿಕೆ ಮಾಡುವಂತೆ ಸತತ ಬೇಡಿಕೆ ಇಡುತ್ತಾ ಬಂದಿದ್ದ ಚಾಲಕರು ಮನವಿಯನ್ನು ಪರಿಗಣಿಸಿ ಈಗಾಗಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಬೆಲೆ ಏರಿಕೆಗೆ ಅನುಮತಿ ನೀಡಿ ಆದೇಶಿಸಿದ್ದಾರೆ.
“ನಾಳೆಯಿಂದ ಆಟೋ ಬೆಲೆ ಏರಿಕೆ ಹೀಗಿದೆ :”
– ಕನಿಷ್ಟ ಮೊದಲ 2 ಕಿ.ಮೀಗೆ 36ರೂಪಾಯಿ ಫಿಕ್ಸ್.
– ನಂತರದ ಪ್ರತಿ ಕಿ.ಮೀಗೆ 18 ರೂಪಾಯಿ.
– ಮೊದಲ ಐದು ನಿಮಿಷ ಕಾಯುವಿಕೆ ಉಚಿತ.
– ಪ್ರತಿ ಹದಿನೈದು ನಿಮಿಷ ಕಾಯುವಿಕೆ ದರ ರೂ 10.
– 20 ಕೆ.ಜಿ ಲಗೇಜಿಗೆ ಉಚಿತ .
– 20 ಕೆ.ಜಿ ಗಿಂತ ಹೆಚ್ಚಿದ್ದರೇ 10ರೂ ಲಗೇಜ್ ಶುಲ್ಕ.
– ರಾತ್ರಿ ವೇಳೆಯಲ್ಲಿ ಪ್ರಯಾಣಿಸಿದರೇ ಸಾಮಾನ್ಯ ದರ ಜೊತೆಗೆ ಅರ್ಧಪಟ್ಟು ಹೆಚ್ಚು ಹಣ ವಿಧಿಸಲು ಅವಕಾಶ.
– ರಾತ್ರಿ ಪ್ರಯಾಣದ ಸಮಯ ರಾತ್ರಿ 10ರಿಂದ ಬೆಳಗಿನ ಜಾವ 5ಗಂಟೆಯವರೆಗೆ.
– ಈ ಹೊಸ ದರ ಏರಿಕೆಯ ಪಟ್ಟಿಯನ್ನ ಪ್ರತಿ ಆಟೋದ ಮೇಲೆ ಕಡ್ಡಾಯವಾಗಿ ಹಾಕಲು ಸೂಚನೆ.
– ಪರಿಷ್ಕೃತ ದರದ ಹೊಸ ಮೀಟರ್ ಅನ್ನು ಅಕ್ಟೋಬರ್ 31-2025ರೊಳಗೆ ಹಾಕಿಸಿಕೊಳ್ಳುವುದು ಕಡ್ಡಾಯ.