ಮೈಸೂರು: ಹಾಲು ಮಾರಾಟ ಮಾಡುವ ಕೇಂದ್ರದಲ್ಲಿ ಆಲ್ಕೋಹಾಲ್ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೂಟ್ ನಂಬರ್ 126ರ ಏಜೆನ್ಸಿ ಸಂಖ್ಯೆ 507 ನಂದಿನಿ ಪಾರ್ಲರ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹೆಡಿಯಾಲ ಗ್ರಾಮ ಪಂಚಾಯತಿ ಕಟ್ಟಡದ ಎದುರೇ ಇರುವ ನಂದಿನಿ ಹಾಲಿನ ಕೇಂದ್ರದಲ್ಲಿ ಈ ರೀತಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮದ್ಯದ ಬಾಟಲಿ ಕೊಡುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹಾಲು ಮಾರಾಟದ ನೆಪದಲ್ಲಿ ಮದ್ಯ ಮಾರಾಟದ ಗಂಭೀರ ಆರೋಪ ಕೇಳಿ ಬಂದಿದ್ದು, ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.