ಬೆಂಗಳೂರು ಗ್ರಾಮಾಂತರ : ಪ್ರೀತಿಸಿ ಗರ್ಭಿಣಿ ಮಾಡಿದ ನಂತರ ಮದುವೆಯಾಗಲ್ಲ ಎಂದು ಕೈಕೊಟ್ಟ ಪ್ರಿಯತಮ ತನ್ನ ಪ್ರಿಯತಮೆಯನ್ನೇ ಮನೆಯ ಕೋಣೆಗೆ ಬೆಂಕಿ ಹಂಚಿ ಕೊಲೆಗೆ ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎಂಟು ವರ್ಷಗಳಿಂದೆ ಜಿಮ್ ಟ್ರೈನರ್ ಗೌತಮ್ ನನ್ನ ಪ್ರೀತಿಸಿದ್ದ ಮಹಿಳೆ ಲಕ್ಷ್ಮೀ ಸಂತ್ರಸ್ತ ಮಹಿಳೆ. ಪ್ರೀತಿಸಿ ಬಲವಂತವಾಗಿ ಲೈಂಗಿಕ ಸಂಪರ್ಕಿಸಿ ಮಹಿಳೆಯನ್ನುನ ಗರ್ಭಿಣಿ ಮಾಡಿ ಮದುವೆಯಾಗಲ್ಲ ಎಂದು ಪೀಡಿಸಿದ್ದಕ್ಕೆ ಮಹಿಳೆ ಮದುವೆಯಾಗಲೇಬೇಕು ಎಂದು ಒತ್ತಾಯಿಸಿದ್ದಾಳೆ. ಈ ಹಿನ್ನೆಲೆಯಲ್ಲಿ 20 ದಿನಗಳಿಂದ ಮನೆಯಲ್ಲಿಟ್ಟುಕೊಂಡು ಮಹಿಳೆ ಮತ್ತು ಮತ್ತು ಮಗುಗೆ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದೇ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿ 376 ಕಾಯ್ದೆಯಡಿ ಮಹಿಳೆ ಪ್ರಕರಣ ದಾಖಲಿಸಿದ್ದಳು. ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣ ವಾಪಸ್ ಪಡೆಯುವಂತೆ ಮಹಿಳೆಯನ್ನು ಮನೆಗೆ ಕರೆದೊಯ್ದು ರಾಜಿ ಪಂಚಾಯತಿಗೆ ಯತ್ನಿಸಿದ್ದು, ಯಾವುದೂ ಫಲಿಸದೇ ಮಹಿಳೆಯನ್ನು ಬೆಂಕಿ ಹಚ್ಗಚಿ ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಮನೆ ಹೊತ್ತಿ ಉರಿಯುವ ದೃಶ್ಯ ಸ್ಥಳಿಯರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು, ವರ್ಷಕ್ಕೊಂದ ಯುವತಿಯ ಜೊತೆ ಲೈಂಗಿಕ ಸಂಪರ್ಕ ಬೆಳಸಿ ಗೌತಮ್ ಮೋಸ ಮಾಡಿದ್ದಾನೆ ಎಂಬ ಆರೋಪವೂ ಕೇಳಿ ಬಂದಿದೆ.
ನಮಗೆ ನ್ಯಾಯ ಕೊಡಿಸಿ ಅಂತ ಹಲ್ಲೆಗೊಳಗಾಗಿ ಮಹಿಳೆ ಒತ್ತಾಯಿಸಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















