ಬೆಂಗಳೂರು: ಗಾಡಿ ಟಚ್ ಆಗಿದ್ದಕ್ಕೆ ನಡುರಸ್ತೆಯಲ್ಲಿ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ರೈಲ್ವೇ ಗೇಟ್ ಹಿಂಭಾಗ ಇಟಿಯೋಸ್ ಮತ್ತು ಇನ್ನೋವಾ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಆಗ ಇನ್ನೋವಾ ಕಾರು ಚಾಲಕನಿಂದ ಇಟಿಯೋಸ್ ಕಾರ್ ಚಾಲಕನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ನಡು ರಸ್ತೆಯಲ್ಲಿ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾನೆಂದು ತಿಳಿದು ಬಂದಿದೆ.
ಅಲ್ಲಿದ್ದವರು ಕೂಡಲೇ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಆಗ ಉದ್ರಿಕ್ತಗೊಂಡ ಸ್ಥಳೀಯರು ಇನ್ನೋವಾ ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ನಂತರ ಅಲ್ಲಿಂದ ಇನ್ನೋವಾ ಚಾಲಕ ಪರಾರಿಯಾಗಿದ್ದಾನೆ.