ನವದೆಹಲಿ: ಗಡಿಯಲ್ಲಿ ಪಾಕಿಸ್ತಾನ ಹುಚ್ಚುತನ ಪ್ರದರ್ಶಿಸುತ್ತಿದ್ದು, ಇದಕ್ಕೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಪಾಕಿಸ್ತಾನ (Pakistan), ಭಾರತೀಯ ಸೇನಾ (Indian Air Force) ನೆಲೆಯನ್ನೇ ಟಾರ್ಗೆಟ್ ಮಾಡಿದೆ. ಜಮ್ಮು ವಾಯುನೆಲೆ, ಜೈಸಲ್ಮೇರ್, ಪಠಾಣ್‌ಕೋಟ್, ಅಖ್ನೂರ್, ರಾಜೌರಿ,ಪೂಂಚ್, ತಂಗಹಾರ್, ಸೇರಿದಂತೆ ಗಡಿ ಸಮೀಪದ ಹಲವಾರು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದೆ. ಆದರೆ, ಭಾರತ ಪಾಕ್ ಗೆ ತಕ್ಕ ಉತ್ತರ ನೀಡಿದ್ದು, ಪಾಕ್ ನ ತಂತ್ರ ವಿಫಲಗೊಳಿಸಿದೆ.
ಪಾಕಿಸ್ತಾನದ ಫೈಟರ್ ಜೆಟ್ ಎಫ್-16 ನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿದೆ ಎನ್ನಲಾಗುತ್ತಿದೆ. ಚನಿ ಹಿಮತ್, ಆರ್‌ಎಸ್ ಪುರ, ಜಮ್ಮುವಿನ 3 ಕಡೆಯಲ್ಲಿ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪ ಕ್ ನಿಂದ ದಾಳಿ ಮುಂದುವರೆದಿದೆ. ಹೀಗಾಗಿ ಜಮ್ಮುವಿನಾದ್ಯಂತ ವಾಯು ದಾಳಿ ಸೈರನ್ ಮೊಳಗಿದೆ.
ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದ್ದು, ಎಸ್ -400 ಸೇರಿದಂತೆ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಕ್ಷಿಪಣಿ, ಡ್ರೋನ್‌ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ನ್ನು ಪಾಕಿಸ್ತಾನದ 1 ಎಫ್-16, 2 ಜೆಎಫ್-17 ಫೈಟರ್ ಜೆಟ್ ಗಳನ್ನು ಧ್ವಂಸ ಮಾಡಲಾಗಿದೆ. ಹೀಗಾಗಿ ಗಡಿಯಲ್ಲಿ ಯುದ್ಧದ ವಾತಾವರಣ ಆವರಿಸಿದೆ. ಶ್ರೀನಗರದ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪಾಕಿಸ್ತಾನದ ಎಲ್ಲ ದಾಳಿಗೆ ಭಾರತ ತಕ್ಕ ಉತ್ತರ ನೀಡಿದ್ದು, ಎಲ್ಲ ಯತ್ನಗಳನ್ನೂ ವಿಫಲಗೊಳಿಸಿದೆ.



















