ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನ ಬಿಗಿ ಹಿಡಿತ ಸಾಧಿಸಿದ್ದು, ಆರಂಭಿಕ ಆಘಾತ ಎದುರಿಸಿದೆ. ಆದರೆ, ಭಾರತೀಯ ಬೌಲರ್ ಗಳ ಮುಂದೆ ನ್ಯೂಜಿಲೆಂಡ್ ಆಟಗಾರರು ಮಂಡಿಯೂರಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳು ನ್ಯೂಜಿಲೆಂಡ್ ತಂಡವನ್ನು ಕೇವಲ 259 ರನ್ ಗಳಿಗೆ ಆಲೌಟ್ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಒದಗಿಸುವ ಸೂಚನೆ ನೀಡಿತು. ಆದರೆ, ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್ ಕಿವೀಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಈ ಇಬ್ಬರು ಸ್ಪಿನ್-ಆಲ್ ರೌಂಡರ್‌ಗಳು ಭಾರತೀಯ ಕ್ರಿಕೆಟ್‌ನಲ್ಲಿ ಹಿಂದೆಂದೂ ಸಂಭವಿಸದ ದಾಖಲೆಯನ್ನು ನಿರ್ಮಿಸಿದರು.
ವಾಷಿಂಗ್ಟನ್ ಸುಂದರ್ ಕೇವಲ 59 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಆಡಿದ್ದ 4 ಟೆಸ್ಟ್‌ಗಳ 7 ಇನ್ನಿಂಗ್ಸ್ ಗಳಲ್ಲಿ ಕೇವಲ 6 ವಿಕೆಟ್ ಪಡೆದಿದ್ದ ಸುಂದರ್ ಈಗ ಒಂದೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಸ್ಪೆಲ್ ಮಾಡಿದ ಭಾರತದ ಜಂಟಿ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಸುಂದರ್ 7 ಮತ್ತು ಅಶ್ವಿನ್ 3 ವಿಕೆಟ್ ಪಡೆದರು. ಈ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್ ವೊಂದರಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೊದಲ ಆಫ್ ಸ್ಪಿನ್ ಜೋಡಿ ಎಂಬ ದಾಖಲೆ ಈ ಆಟಗಾರರಯನ್ನು ಸುಂದರ್ ಹಾಗೂ ಅಶ್ವಿನ್ ಬರೆದಿದ್ದಾರೆ. ಈ ಪೈಕಿ ಸುಂದರ್ ಬರೋಬ್ಬರಿ ಐವರನ್ನು ಬೋಲ್ಡ್ ಮಾಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ನಾಥನ್ ಲಿಯಾನ್ ರನ್ನು ಹಿಂದಿಕ್ಕಿದ್ದಾರೆ. ಅಶ್ವಿನ್ 189 ವಿಕೆಟ್ ಪಡೆದರೆ, ಲಿಯಾನ್ 187 ವಿಕೆಟ್ ಪಡೆದಿದ್ದಾರೆ.