ಬೆಂಗಳೂರು : ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಗುಡುಗಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವ್ಯವಸ್ಥೆಯೇ ಆಗಿದೆ. ಕಳೆದ ವರ್ಷವೂ ಯೂರಿಯಾ ಇದ್ದರೂ, ಸರಿಯಾದ ವ್ಯವಸ್ಥೆ ಮಾಡದೇ ಅವ್ಯವಸ್ಥೆಯಾಗಿತ್ತು. ಈಗಲೂ ಯೂರಿಯಾ ಕೊರತೆ ಆಗಿದೆ. ಇದನ್ನು ನಿರ್ವಹಣೆ ಮಾಡುವುದರಲ್ಲಿ ಕೃಷಿ ಇಲಾಖೆ ವಿಫಲವಾಗಿದೆ. ರಾಜ್ಯದಲ್ಲಿ ಹೆಚ್ಚು ಬೇಡಿಕೆ ಇದ್ದರೆ ಕೇಂದ್ರಕ್ಕೆ ಮೊದಲೇ ಹೇಳಬೇಕಿತ್ತು. ಜೋಷಿ, ಬೊಮ್ಮಾಯಿ ಸೇರಿ ನಮ್ಮ ನಾಯಕರು ಕೇಂದ್ರ ಸಚಿವ ನಡ್ಡಾ ಅವರಿಗೆ ಯೂರಿಯಾ ಹೆಚ್ಚು ಕೊಡಲು ಮನವಿ ಮಾಡಿದ್ದಾರೆ. ಅವರು ಕೂಡಾ ಜಾಸ್ತಿ ಕೊಡುವುದಾಗಿ ಹೇಳಿದ್ದಾರೆಂದು ತಿಳಿಸಿದ್ದಾರೆ.
ಈ ಬಾರಿ ಹೆಚ್ಚು ಬಿತ್ತನೆ ಆಗಿದೆ. ರಾಜ್ಯ ಸರ್ಕಾರ ಜವಾಬ್ದಾರಿಯಾಗಿ ವರ್ತನೆ ಮಾಡಬೇಕು. ಮೈಮರೆಯಬಾರದು. ಯೂರಿಯಾ ಲಭ್ಯತೆ ಇದ್ದರೂ, ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂದು ಆಶ್ವತ್ಥ್ ನಾರಾಯಣ್ ಕೆಂಡ ಕಾರಿದ್ದಾರೆ.

















