ಜಾಗತಿಕ ಮತ್ತು ಸ್ಥಳೀಯ ಗ್ರಾಹಕರಿಗೆ ಎಳೆಯಿಂದ ಫ್ಯಾಷನ್ ವರೆಗೆ ಉಡುಪುಗಳನ್ನು ಪೂರೈಸುವ ಅರವಿಂದ್ ಲಿಮಿಟೆಡ್ ತನ್ನ ಹೊಸ ಬೇಸಿಗೆ ಅಭಿಯಾನ, `ಲಿನೆನ್ ಬೈ ಅರವಿಂದ್, “ಫಾರ್ ಆಲ್ ಕೈಂಡ್ಸ್ ಆಫ್ ಕೂಲ್’ಗೆ ಚಾಲನೆ ನೀಡಿದೆ. ಈ ಅಭಿಯಾನವು ಲಿನೆನ್ ಈ ಬೇಸಿಗೆ ಅತ್ಯುತ್ತಮ ವಸ್ತ್ರವಾಗಿದ್ದು ಸ್ಟೈಲ್, ಬ್ರೀಥಬಿಲಿಟಿ ಮತ್ತು ಬಿಸಿಲಿನಲ್ಲಿ ಸೌಖ್ಯ ಬಯಸುವ ಗ್ರಾಹಕರಿಗೆ ಅತ್ಯುತ್ತಮ ವಸ್ತ್ರ ಎಂದು ಅರವಿಂದ್ ಲಿಮಿಟೆಡ್ ಬದ್ಧತೆಯನ್ನು ಎತ್ತಿ ತೋರಿಸಲಿದೆ.
ಈ ಅಭಿಯಾನದೊಂದಿಗೆ ಅರವಿಂದ್ ಲಿಮಿಟೆಡ್ 300ಕ್ಕೂ ಹೆಚ್ಚು ಹೊಸ ಸ್ಟೈಲ್ ಗಳೊಂದಿಗೆ ತನ್ನ ಲಿನೆನ್ ಶ್ರೇಣಿಯನ್ನು ವಿಸ್ತರಿಸಿದೆ. ಈ ಹೊಚ್ಚಹೊಸ ಶ್ರೇಣಿಯು ಆವಿಷ್ಕಾರಕ ಇಂಟೆಲ್ಲಿ-ಫ್ಯಾಬ್ರಿಕ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದು ಅದು ಸುಕ್ಕುರಹಿತ ಲಿನೆನ್, ಬ್ರೀಥಬಲ್ ಬ್ಲೆಂಡ್ಸ್ ಮತ್ತು ವೂಲ್ ಬ್ಲೆಂಡೆಡ್ ಲಿನೆನ್ ಫ್ಯಾಬ್ರಿಕ್ಸ್ ಮೂಲಕ ವಿಶಿಷ್ಟ ಗುಣಗಳನ್ನು ತಂದಿದೆ. ಸೂಟಿಂಗ್ ಶ್ರೇಣಿಯಲ್ಲಿ ಸ್ಟೈಲಿಷ್ ಆದರೆ ಅನುಕೂಲಕರ ಲಿನೆನ್ ಆಯ್ಕೆಗಳು ಔಪಚಾರಿಕ ಮತ್ತು ವಿಶೇಷ ಸಂದರ್ಭಗಳಿಗೂ ಹೊಂದುವಂತೆ ತಂದಿದೆ. ಈ ಹೊಸ ಸಂಗ್ರಹವು ದೇಶಾದ್ಯಂತ 160+ ಅರವಿಂದ್ ಲಿಮಿಟೆಡ್ ಮಳಿಗೆಗಳು ಹಾಗೂ ಮುಂಚೂಣಿಯ ಮಲ್ಟಿ-ಬ್ರಾಂಡ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ.
ಅರವಿಂದ್ ಲಿಮಿಟೆಡ್ ನಿಟ್ಸ್ ಅಂಡ್ ರೀಟೇಲ್ ಚೀಫ್ ಬಿಸಿನೆಸ್ ಆಫೀಸರ್ ಪ್ರಣವ್ ದವೆ, “ಲಿನೆನ್ ಸದಾ ಬೇಸಿಗೆಗೆ ಸಮಾನಾರ್ಥಕವಾಗಿದೆ, ಆದರೆ ಈ ಸಂಗ್ರಹದೊಂದಿಗೆ ಬೇಸಿಗೆ ಉಡುಪಿಗಿಂತ ಹೆಚ್ಚಿನದನ್ನು ಕಾಣುವ ಸಮಯವಾಗಿದೆ. ಇಂದಿನ ಫ್ಯಾಷನ್ ಎಂದರೆ ವೈವಿಧ್ಯತೆ ಮತ್ತು ಲಿನೆನ್ ವಸ್ತ್ರವಾಗಿ ಅಂತಹ ಬೇಡಿಕೆಗಳಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅದು ಕೆಲಸ, ಪ್ರಯಾಣ ಅಥವಾ ಪ್ರತಿನಿತ್ಯದ ಕೆಲಸವಾಗಿರಲಿ ಲಿನೆನ್ ಸ್ಟೈಲ್ ಹಾಗೂ ಸೌಖ್ಯ ಒದಗಿಸುವ ಸಮಯರಹಿತ ಆಯ್ಕೆಯಾಗಿದೆ. ಈ ಸಂಗ್ರಹದ ಮೂಲಕ ನಾವು ಜನರಿಗೆ ಅನುಭವ ಪಡೆದುಕೊಳ್ಳಲು ಮತ್ತು ಇಡೀ ವರ್ಷದ ಅಗತ್ಯವಾಗಿಸಿಕೊಳ್ಳಲು ಬಯಸುತ್ತೇವೆ. ನಾವು ಜನರಿಗೆ ಲಿನೆನ್ ಅನ್ನು ಅದರ ಸೌಖ್ಯಕ್ಕಾಗಿ ಮಾತ್ರವಲ್ಲ, ಬದಲಿಗೆ ಅದು ತರುವ ವಿಶ್ವಾಸಕ್ಕಾಗಿ ಧರಿಸಲು, ಅದು ನೀವು ಕಾಣುವಂತೆಯೇ ಭಾವನೆ ತರುವ ನೈಜ ಸ್ಟೈಲ್ ಆಗಲು ಬಯಸುತ್ತೇವೆ” ಎಂದರು.