ಚಂಡೀಗಢ: ಪಂಜಾಬಿನ ಪಠಾಣ್ ಕೋಟ್ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಉಗ್ರನೊಬ್ಬನನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದೆ. ಪಠಾಣ್ ಕೋಟ್ ಜಿಲ್ಲೆ ಬಿಒಪಿ ತಾಶ್ ಪಟಾಣ್ ಪ್ರದೇಶದಲ್ಲಿ ಬಿಎಸ್ಎಫ್ ಯೋಧರು ಒಬ್ಬ ಉಗ್ರನನ್ನು ಹತ್ಯೆಗೈದಿದ್ದಾರೆ.
ಬುಧವಾರ ಬೆಳಗಿನ ಜಾವ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಾಸ್ಪದ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ ಬಿಎಸ್ಎಫ್ ಯೋಧರು ಅಲರ್ಟ್ ಆಗಿದ್ದಾರೆ. ಭದ್ರತಾ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ಆರಂಭಿಸಿದಾಗ ಒಬ್ಬ ವ್ಯಕ್ತಿ ಒಳನುಸುಳಲು ಯತ್ನಿಸುತ್ತಿದ್ದನ್ನು ಕಂಡು ಹತ್ಯೆ ಮಾಡಿದ್ದಾರೆ. ಒಳನುಸುಳುಕೋರನು ಯಾವ ಉಗ್ರ ಸಂಘಟನೆಗೆ ಸೇರಿದವನು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದು ಬಿಎಸ್ಎಫ್ ತಿಳಿಸಿದೆ.
ಕೆಲ ದಿನಗಳ ಹಿಂದೆ ಮೇಘಾಲಯ ಗಡಿಯಲ್ಲೂ ಒಳನುಸುಳುಕೋರರು ಗಡಿ ದಾಟಲು ಯತ್ನಿಸಿದ್ದರು. ಕೂಡಲೇ ಭದ್ರತಾ ಸಿಬ್ಬಂದಿಯು ಯತ್ನವನ್ನು ವಿಫಲಗೊಳಿಸಿತ್ತು. ಈಗ ಮತ್ತೆ ಪಂಜಾಬ್ ಗಾಡಿಯಲ್ಲಿ ಒಳನುಸುಳುಕೊರರ ಹಾವಳಿ ಜಾಸ್ತಿಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸೇನೆಯು ಸತತ ಕಾರ್ಯಚರಣೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಪಾಕಿಸ್ತಾನ ಸೇನೆ ನೆರವಿನಿಂದ ಬೇರೆ ರಾಜ್ಯಗಳ ಗಡಿಗಳ ಮೂಲಕ ಒಳನುಸುಳಳು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಸೇನೆಯು ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ.