ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಶೋ ಬಿಗ್ ಬಾಸ್. ಕನ್ನಡದಲ್ಲಿ 11 ಸೀಸನ್ಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ 12ನೇ ಸೀಸನ್ ಗೆ ನಿರೀಕ್ಷೆ ಹೆಚ್ಚಾಗಿದೆ.
ಕಿಚ್ಚ ಸುದೀಪ್ ಈ ಬಾರಿಯ ಬಿಗ್ ಬಾಸ್ ಶೋ ಹೋಸ್ಟ್ ಮಾಡಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಯಾರು ಹೋಗುತ್ತಾರೆ ಎನ್ನುವ ಪ್ರಶ್ನೆ ಬಹುತೇಕ ಜನರನ್ನು ಕಾಡುತ್ತಿದೆ. ಒಂದಿಷ್ಟು ಮಂದಿಯ ಹೆಸರು ಕೂಡ ವೈರಲ್ ಆಗುತ್ತಿವೆ. ಯೂಟ್ಯೂಬರ್ ವರುಣ್ ಆರಾಧ್ಯ ಹೆಸರು ಕೂಡ ಕೇಳಿ ಬರುತ್ತಿದೆ.
ಗಟ್ಟಿಮೇಳ ಸೀರಿಯಲ್ ಮೂಲಕ ಹೆಸರುವಾಸಿಯಾಗಿದ್ದ ಅಶ್ವಿನಿ ಹಾಗೂ ನಿಶಾ ರವಿಕೃಷ್ಣ ನ್ ಅವರಿಗೂ ಬಿಗ್ ಬಾಸ್ ಆಫರ್ ಬಂದಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿದ್ದ ಪವಿತ್ರಗೌಡ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ವಿವಾದಗಳಿಂದಲೇ ಸುದ್ದಿಯಾದ ಇವರು ಬಿಗ್ ಬಾಸ್ ಮನೆಗೆ ಹೋದರೆ ಹೇಗಿರುತ್ತೆ ಅನ್ನೋದು ಬಹುತೇಕರ ಪ್ರಶ್ನೆಯಾಗಿದೆ.
ಮಹಾನಟಿ ರಿಯಾಲಿಟಿ ಶೋ ಮೂಲಕ ಮನೆ ಮಾತಾದ ನಟಿ ಗಗನ ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನಲಾಗುತ್ತಿದೆ. ಅಮೃತಾಂಜನ್ ಹಾಗೂ ಸಾಕಷ್ಟು ಕಿರು ಚಿತ್ರಗಳ ಮೂಲಕ ಖ್ಯಾತಿಗಳಿಸಿದ ಪಾಯಲ್ ಚಂಗಪ್ಪ ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರಬಂದ ಸಂಜನಾ ಬುರ್ಲಿ, ಮಂಗಳೂರಿನ ಅಭಿಜ್ಞಾಭಟ್, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳಾದ ಭೂಮಿಕಾ ಬಸವರಾಜ್, ಕಿಪ್ಪಿ ಕೀರ್ತಿ, ರೀಲ್ಸ್ ರೇಷ್ಮಾ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.