ಮೈಸೂರು : ಪವರ್ ಸ್ಟಾರ್ ದಿ .ಪುನೀತ್ ರಾಜ್ ಕುಮಾರ್ 51ನೇ ಹುಟ್ಟು ಹಬ್ಬವನ್ನು ಮೈಸೂರಿನಲ್ಲಿ ವಿಶೇಷವಾಗಿ ಅಭಿಮಾನಿಗಳು ಆಚರಿಸಿದ್ದಾರೆ. ರಂಗೋಲಿಯಲ್ಲಿ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಬಿಡಿಸುವ ಮೂಲಕ ಸಂಭ್ರಮಿಸಿದ್ದಾರೆ.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ರಂಗೋಲಿಯಲ್ಲಿ 8500 ಅಡಿಗಳಷ್ಟು ಬೃಹತ್ ಭಾವ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕರ್ನಾಟಕದ ಭೂಪಟದ ಒಳಗೆ ವರನಟ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಚಿತ್ರ ಬಿಡಿಸಿದ್ದಾರೆ.
ಈ ಮೂಲಕ ಪುನೀತ್ ರಾಜಕುಮಾರ್‌ಗೆ ಹುಟ್ಟು ಹಬ್ಬದ ಶುಭಾಶಯಗಳು ಕಂದ ಎಂದು ಬರೆದು ವಿಶ್ ಮಾಡಿದ್ದಾರೆ. ಈ ಭವ್ಯ ಭಾವಚಿತ್ರವು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಇಂದು ಪುನೀತ್ ರಾಜ್‌ಕುಮಾರ್ ಬರ್ತಡೇ : ಅಪ್ಪು ಫ್ಯಾನ್ಸ್ ವತಿಯಿಂದ ಉಚಿತ ಚಾಟ್ಸ್ ವಿತರಣೆ



















