ಬೆಂಗಳೂರು: ದೇಶದ ಪ್ರತಿಷ್ಠಿತ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯಲ್ಲಿ (DRDO) 20 ವಿಜ್ಞಾನಿಗಳ ಹುದ್ದೆ ಖಾಲಿ ಇದ್ದು, ಆನ್ ಲೈನ್ ಮೂಲಕ ಅರ್ಜಿ (DRDO Recruitment 2025) ಆಹ್ವಾನಿಸಲಾಗಿದೆ. ವಿಜ್ಞಾನಿ ಎಫ್, ಡಿ, ಬಿ ಹಾಗೂ ಸಿ ವಿಭಾಗದ ವಿಜ್ಞಾನಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಏಪ್ರಿಲ್ 1 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹುದ್ದೆಗಳ ವಿವರ ಸೇರಿ ಮುಂತಾದ ಮಾಹಿತಿ ಇಲ್ಲಿದೆ.
ಯಾವ ವಿಭಾಗದಲ್ಲಿ ಎಷ್ಟು ಹುದ್ದೆ ಖಾಲಿ?
ಸೈಂಟಿಸ್ಟ್ ಎಫ್-01
ಸೈಂಟಿಸ್ಟ್ ಡಿ- 10
ಸೈಂಟಿಸ್ಟ್ ಬಿ- 02
ಸೈಂಟಿಸ್ಟ್ ಸಿ- 07
ಜನರಲ್, ಒಬಿಸಿ ಹಾಗೂ ಇಡಬ್ಲ್ಯೂ ಎಸ್ ವರ್ಗದವರಿಗೆ ಅರ್ಜಿ ಸಲ್ಲಿಸಲು 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್ ಸಿ, ಎಸ್ ಟಿ, ದಿವ್ಯಾಂಗರು ಹಾಗೂ ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಸುವುದು ಸೇರಿ ವಿವಿಧ ಮಾಹಿತಿ ಪಡೆಯಲು ಡಿಆರ್ ಡಿಒ ಅಧಿಕ ವೆಬ್ ಪೋರ್ಟಲ್ ಆಗಿರುವ rac.gov.in ಗೆ ಭೇಟಿ ನೀಡಬಹುದಾಗಿದೆ.
ಮಾಸಿಕ ಸಂಬಳ ಎಷ್ಟು?
ಸೈಂಟಿಸ್ಟ್ ಎಫ್ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 2.20 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಸೈಂಟಿಸ್ಟ್ ಡಿ ಹುದ್ದೆಗೆ ನೇಮಕಾತಿ ಹೊಂದಿದವರಿಗೆ 1.24 ಲಕ್ಷ ರೂ., ಸೈಂಟಿಸ್ಟ್ ಬಿ ಹುದ್ದೆಯವರಿಗೆ 1.08 ಲಕ್ಷ ರೂ. ಹಾಗೂ ಸೈಂಟಿಸ್ಟ್ ಸಿ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 90 ಸಾವಿರ ರೂ.ವರೆಗೆ ಸಂಬಳ ನೀಡಲಾಗುತ್ತದೆ. ಬಿ.ಟೆಕ್ ಹಾಗೂ ಬಿಇ ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಸೈಂಟಿಸ್ಟ್ ಎಫ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 55 ವರ್ಷಗಳ ಮಿತಿ ಇದೆ. ಇನ್ನು ಸೈಂಟಿಸ್ಟ್ ಡಿ ಹುದ್ದೆಗೆ 45 ವರ್ಷ, ಸೈಂಟಿಸ್ಟ್ ಸಿ ಹುದ್ದೆಗೆ 40 ವರ್ಷ ಹಾಗೂ ಸೈಂಟಿಸ್ಟ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 35 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.