ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ ಮತ್ತೊಂದು ಬಲಿ ಪಡೆದಿದೆ. ಸಿಗ್ನಲ್ ನಲ್ಲಿ ಬಸ್ ಹತ್ತಲು ಹೋಗಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಮೋನಿಕಾ (20) ಸಾವನ್ನಪ್ಪಿರುವ ಯುವತಿ. ಸಾವನ್ನಪ್ಪಿರುವ ಯುವತಿಯನ್ನು ಬನಶಂಕರಿ ಹತ್ತಿರ ಇರುವ ಭುವನೇಶ್ವರಿ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿರುವ ಮಹಿಳೆ ಕೆಲಸಕ್ಕೆ ತೆರಳಲು ಬಸ್ಸಿಗೆ ಓಡುತ್ತಿದ್ದಳು. ಹಿಲ್ಸ್ ಚಪ್ಪಲಿ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಬಸ್ಸಿಗೆ ಓಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಓಡುವ ಆತರದಲ್ಲಿ ಕಾಲು ಸ್ಲಿಪ್ಪಾಗಿ ಬಸ್ಸಿನ ಕೆಳಗೆ ಬಿದ್ದ ಮಹಿಳೆ ಬಸ್ ಹತ್ತಲು ಮಹಿಳೆ ಓಡಿ ಹೋಗಿದ್ದಾರೆ. ಆಗ ಸಿಗ್ನಲ್ ಬಿಟ್ಟಿದೆ. ಹೀಗಾಗಿ ಅವರು ಈ ವೇಳೆ ಎಡವಿ ಬಿಎಂಟಿಸಿ ಬಸ್ ನ ಹಿಂದಿನ ಚಕ್ರದ ಅಡಿ ಬಿದ್ದಿದ್ದಾರೆ. ಗಮನಿಸದ ಚಾಲಕ ಬಸ್ ಚಲಾಯಿಸಿದ್ದರಿಂದಾಗಿ ಮಹಿಳೆಯ ಮೇಲೆ ಬಸ್ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ 8.45ಕ್ಕೆ ಈ ಘಟನೆ ನಡೆದಿದೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವೇಗೌಡ ಪೆಟ್ರೋಲ್ ಬಂಕ್ ಸಿಗ್ನಲ್ ಬಳಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದ ದೃಶ್ಯ ಸಿಗ್ನಲ್ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. 410 FA/12 ಬಸ್ ನಿಂದ ಈ ದುರ್ಘಟನೆ ನಡೆದಿದ್ದು, ರಾಜಕುಮಾರ್ ಎಂಬ ಚಾಲಕ ಬಸ್ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.