ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಬಾಣಸವಾಡಿ ಫ್ಲೈಓವರ್ ಹತ್ತಿರ ಈ ಘಟನೆ ನಡೆದಿದೆ. ಮೊಹಮ್ಮದ್ ಜಮ್ಷಿರ್ (40) ಸಾವನ್ನಪ್ಪಿರುವ ದುರ್ದೈವಿ. ಘಟನೆಯಲ್ಲಿ ಜಮ್ಷಿರ್ ಪತ್ನಿ ಆಯಿಷಾ, ಮಕ್ಕಳಾದ ಅಲೀಜಾ, ಆಫಿಯಾಗೆ ಗಾಯಗೊಂಡಿದ್ದಾರೆ.
ಆಯಿಷಾ ಕಾಲು ಮತ್ತು ಬಲಗೈಗೆ ಗಾಯಗಳಾಗಿವೆ. ಒಂದೂವರೆ ವರ್ಷದ ಮಗು ಆಫಿಯಾ ಬ್ರೈನ್ ಮೂಳೆ ಕಟ್ ಆಗಿದೆ ಎನ್ನಲಾಗಿದೆ. ಬಾಲಕಿ ಅಲೀಜಾ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.