ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ಗೆ ಡಿಆರ್‌ಐ ಮತ್ತೊಂದು ಆಘಾತ ನೀಡಿದೆ. 127 ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿರಿವುದು ಸಾಬೀತಾದ ಬೆನ್ನಲ್ಲೇ ನಟಿಗೆ 102 ಕೋಟಿ ರೂ. ದಂಡ ವಿಧಿಸಿದೆ.
ಡಿಆರ್‌ಐ ತನಿಖೆಯಲ್ಲಿ 127 ಕೆ.ಜಿ ಚಿನ್ನವನ್ನು ಅಕ್ರಮ ಸಾಗಾಟ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ 102 ಕೋಟಿ ರೂ. ದಂಡ ಪಾವತಿ ಮಾಡುವಂತೆ ರನ್ಯಾ ರಾವ್‌ಗೆ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳಿಗೂ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದ್ದು, ಈಗಾಗಲೇ ಇ.ಡಿ 37 ಕೋಟಿಯಷ್ಟು ಆಸ್ತಿ ಜಪ್ತ ಮಾಡಿದೆ. ಆಸ್ತಿ ಕಳೆದುಕೊಂಡು ಖಾಲಿ ಕೈಯಾಗಿರುವ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದಂಡ ಸಮೇತ 102 ಕೋಟಿ ಹಣ ಸಂದಾಯ ಮಾಡಲು ನೋಟಿಸ್ ನೀಡಲಾಗಿದೆ.
ಸದ್ಯ ಕಾಫಿಪೋಸಾ ಅಡಿಯಲ್ಲಿ ರನ್ಯಾ ರಾವ್ ಬಂಧಿಸಲಾಗಿದೆ.



















