ಮುಂಬಯಿ: ಕನ್ನಡ ಮಣ್ಣಿನ ಗುಣವೇ ಹಾಗೆ. ಶ್ರೀಗಂಧದ ತವರೂರ ಕನ್ನಡದ ಪ್ರತಿಭೆ ಎಲ್ಲೆಡೆ ಪಸರಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ವಿಷಯ ಅದಲ್ಲ. ಈಗಾಗಲೇ ಹಲವಾರು ಕನ್ನಡ ಪ್ರತಿಭೆಗಳು ಬೇರೆ ಬೇರೆ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಈ ಮಧ್ಯೆ ಹಲವು ನಟಿಯರು ಬಾಲಿವುಡ್ ನತ್ತ ಮುಖ ಮಾಡಿ ಅಲ್ಲಿಯೇ ಸೆಟಲ್ ಕೂಡ ಆಗಿದ್ದಾರೆ. ಈ ಸಾಲಿಗೆ ಈಗ ಮತ್ತೋರ್ವ ನಟಿ ಬಂದು ನಿಂತಿದ್ದಾರೆ.
ಈಗಾಗಲೇ ಕನ್ನಡತಿ, ನಟಿ ಶ್ರೀಲೀಲಾ ಮತ್ತು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಡೇಟಿಂಗ್ನಲ್ಲಿದ್ದಾರೆ ಎಂಬ ಗಾಸಿಪ್ ಗಳು ಹಬ್ಬಿದ್ದವು. ಈಗ ಸ್ವತಃ ಕಾರ್ತಿಕ್ ಅವರ ತಾಯಿಯೇ ನಮ್ಮನೆಗೆ ಡಾಕ್ಟರ್ ಸೊಸೆ ಆಗಲಿದ್ದಾಳೆ ಎಂದು ಹೇಳುವ ಮೂಲಕ ಗಾಸಿಪ್, ವದಂತಿಗಳಿಗೆ ತೆರೆ ಎಳೆದಿದ್ದಾರೆ. ಅಲ್ಲದೇ, ಕನ್ನಡತಿಯೇ ನಮ್ಮನೆ ಸೊಸೆ ಎಂದು ಹೇಳಿದ್ದಾರೆ.
2025ರ ಐಫಾ (iifa) ಅವಾರ್ಡ್ ಕಾರ್ಯಕ್ರಮದಲ್ಲಿ ನಟ ಕಾರ್ತಿಕ್ ಕಾರ್ಯನ್ ಅವರ ತಾಯಿಗೆ ಭಾವಿ ಸೊಸೆಯ ಬಗ್ಗೆ ಕೇಳಿದಾಗ, ‘ಕುಟುಂಬದ ಬೇಡಿಕೆ ಒಳ್ಳೆಯ ವೈದ್ಯೆ ಆಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಎಂಬಿಬಿಎಸ್ ಓದುತ್ತಿರುವ ನಟಿ ಶ್ರೀಲೀಲಾ ಅವರೇ ನಮ್ಮನೆ ಸೊಸೆ ಆಗಲಿದ್ದಾರೆ ಎಂಬ ಸುಳಿವನ್ನು ನೀಡಿದ್ದಾರೆ. ಈಗಾಗಲೇ ಕಾರ್ತಿಕ್ ಆರ್ಯನ್ ಶ್ರೀಲೀಲಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದು, ಅವರ ತಾಯಿ ಕೂಡ ಸಂಬಂಧವನ್ನು ದೃಢಪಡಿಸಿದ್ದಾರೆ.
ಶ್ರೀಲೀಲಾ ಇತ್ತೀಚೆಗೆ ಕಾರ್ತಿಕ್ ಜೊತೆ ಆಪ್ತ ಕುಟುಂಬದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸುತ್ತಿರುವುದು ಕಂಡು ಬಂದಿದೆ. ಈಗ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಅವರು ʼಆಶಿಕಿ 3ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಹೆಜ್ಜೆ ಇಟ್ಟಿರುವ ಶ್ರೀಲೀಲಾ ಈಗ ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಶ್ರೀಲೀಲಾʼಪುಷ್ಪ 2ʼ ಚಿತ್ರದಲ್ಲಿಯೂ ಡ್ಯಾನ್ಸ್ ಮಾಡಿದ್ದರು. ಶ್ರೀಲೀಲಾ ಅವರ ಕೈಯಲ್ಲಿ ಈಗ ತೆಲುಗು, ಹಿಂದಿ, ತಮಿಳು ಸಿನಿಮಾ ಇವೆ.