ಚಾಮರಾಜನಗರ: ಬಂಡೀಪುರ ಅರಣ್ಯದಲ್ಲಿ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದ್ದು, ಜನಾಕ್ರೋಶ ವ್ಯಕ್ತವಾಗುತ್ತಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಸಂಜೆ 4.30 ರ ಬಳಿಕ ನಿಷೇಧ ಇದ್ದರೂ ಇಡಿಸಿ (ಇಕೋ ಡೆವಲಪ್ಮೆಂಟ್ ಕಮಿಟಿ) ವಾಹನದಲ್ಲಿ ಪ್ರವಾಸಿಗರನ್ನು ಕರೆದೊಯ್ದ ಅರಣ್ಯ ಸಿಬ್ಬಂದಿ ಎಡವಟ್ಟು ಮಾಡಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಬಂಡೀಪುರ ಅರಣ್ಯ ಸಿಬ್ಬಂದಿ ಕೇರಳ ಸಿನಿಮಾದ ಚಿತ್ರೀಕರಣಕ್ಕೆ ಅನುಮತಿ ನೀಡಿ ವಿವಾದವಾಗಿತ್ತು. ಈಗ ಮತ್ತೊಂದು ಎಡವಟ್ಟು ಮಾಡಿದೆ. ಅಧಿಕ ಹಣ ಪಡೆದು ಇಡಿಸಿ ವಾಹನದಲ್ಲಿ ಕರೆದುಕೊಂಡು ಸಿಬ್ಬಂದಿ ಹೋಗಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಸಾರಿಗೆ ಬಸ್ ಗಳನ್ನ ಮಾತ್ರ 4 ಗಂಟೆಗೆ ಕೊನೆ ಮಾಡುವ ಸಿಬ್ಬಂದಿ ಇಡಿಸಿ ವಾಹನದಲ್ಲಿ ಕರೆದೊಯ್ಯುವುದು ಏಕೆ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಿಬ್ಬಂದಿಯ ಕಳ್ಳಾಟ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.