ಬೆಂಗಳೂರು: ನಗರದಲ್ಲಿ ಮತ್ತೊಂದು ಆಟೋ ಕಿರಿಕ್ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಯುವತಿಯೊಬ್ಬರು ಎರಡೆರಡು ಆಪ್ ನಲ್ಲಿ ಆಟೋ ಬುಕ್ ಮಾಡಿ, ಇಬ್ಬರೂ ಚಾಲಕರು ಬರುತ್ತಿದ್ದಂತೆ ಒಂದನ್ನು ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಕ್ಯಾನ್ಸಲ್ ಆಗಿದ್ದ ಆಟೋ ಚಾಲಕ ಹಾಗೂ ಯುವತಿಯ ಮಧ್ಯೆ ಗಲಾಟೆ ನಡೆದಿದೆ. ಆಟೋ ಚಾಲಕನಿಗೆ ಯುವತಿ ಬೈದಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುವತಿಯೊಬ್ಬಳು ಏಕಕಾಲದಲ್ಲಿ ಓಲಾ ಮತ್ತು ರ್ಯಾಪಿಡೋ ಆ್ಯಪ್ ಗಳಲ್ಲಿ ಆಟೋ ಬುಕ್ ಮಾಡಿದ್ದಾರೆ. ಆಗ ಇಬ್ಬರೂ ಏಕಕಾಲಕ್ಕೆ ಬಂದಿದ್ದಾರೆ. ಕೂಡಲೇ ಒಂದು ಆಟೋ ರೈಡ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಚಾಲಕ ಬೇರೆ ಆಟೋ ಹತ್ತಿದ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆಕೆ ಆತನ ಆರೋಪ ನಿರಾಕರಿಸಿದ್ದು, ತಾನು ಬುಕ್ ಮಾಡಿಲ್ಲ ಎಂದು ವಾದಿಸಿದ್ದಾಳೆ.
ಚಾಲಕ ನಾನು ಸುಮಾರು 1.5 ಕಿಮೀ ನಿಂದ ಬಂದು, 15 ನಿಮಿಷ ಕಾದಿದ್ದೇನೆ. ಆದರೂ ಬೇರೆ ಆಟೋಗೆ ಹೋದರೆ ಹೇಗೆ ಎಂದು ಪ್ರಶ್ನಿಸಿದ್ದಾನೆ. ಆಗ ಮಾತಿನ ಚಕಮಕಿ ನಡೆದಿದೆ. ಆಗ ಯುವತಿ ಆಟೋ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಜನರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.