ಬೆಂಗಳೂರು: ಬೆಂಗಳೂರಿನಲ್ಲಿ ಗುಂಡಿಗಳದ್ದೇ ಹಾವಳಿ, ಮಳೆ ಬಂದಾಗಲಂತೂ ಈ ಗುಂಡಿಗಳಿಗೆ ನೀರು ನಿಂತು ಈಗಾಗಲೇ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ ಇದಕ್ಕೆ ಆದಷ್ಟು ಬೇಗ ಮುಕ್ತಿ ನೀಡಿ ಅಂತ ಸಿಲಿಕಾನ್ ಸಿಟಿ ಮಂದಿ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಇವರ ದನಿಯಾಗಿ ಸ್ಯಾಂಡಲ್‌ವುಡ್ ನಟ ಅನಿರುದ್ಧ್ ನಿಂತಿದ್ದಾರೆ.
ಈ ಹಿಂದೆ ಬೆಂಗಳೂರು ನಗರ ಸ್ವಚ್ಛತೆ ಬಗ್ಗೆ ಹೋರಾಟ ಮಾಡುತ್ತಿದ್ದ ಅನಿರುದ್ಧ್ ಈಗ ಸಿಟಿಯಲ್ಲಿರುವ ಡೆಡ್ಲಿ ಗುಂಡಿಗಳನ್ನ ಮುಚ್ಚುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದಾರೆ. ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇವೆ. ಈ ಗುಂಡಿಗಳಿಂದ ಅಪಘಾತಗಳಾಗಿ ಸಾವು ನೋವು ಆಗುವ ಸಂಭವವಿದೆ ಆದ್ದರಿಂದ ಆದಷ್ಟು ಬೇಗ ಈ ಗುಂಡಿಗಳನ್ನು ಮುಚ್ಚಿ ಎಂದು ಆಗ್ರಹಿಸಿದ್ದಾರೆ.



















