ಬೆಂಗಳೂರು: ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಹರಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಭೂಷಣ್ ಪಾಟೀಲ್ (30) ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೆಜೆಸ್ಟಿಕ್ ನ ಟರ್ಮಿನಲ್ 3ರಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿರುವ ಭೂಷಣ್ ಪಾಟೀಲ್ ಎಪಿಎಸ್ ಆರ್ ಟಿಸಿ ಬಸ್ ಗೆ ಒರಗಿ ನಿಂತುಕೊಂಡಿದ್ದಾಗ ಬಸ್ ಚಾಲಕ ಗಮನಿಸಿದೆ ಬಸ್ ಚಾಲನೆ ಮಾಡಿದ್ದಾರೆ. ಪರಿಣಾಮ ಭೂಷಣ್ ಕೆಳಗೆ ಬಿದ್ದಿದ್ದಾರೆ. ಆಗ ಬಸ್ ಅವರ ತಲೆಯ ಮೇಲೆ ಹರಿದಿದೆ. ಪರಿಣಾಮ ಭೂಷಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭೂಷಣ್ ಪಾಟೀಲ್ ಮೂಲತಃ ಬೆಳಗಾವಿಯ ಖಾನಾಪುರದವರು ಎನ್ನಲಾಗಿದೆ. ಈ ಕುರಿತು ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.