ಕರ್ನಾಟಕದಲ್ಲಿ ಈಗಾಗಲೇ ವಕ್ಫ್ ವಿರುದ್ಧ ಬಿಜೆಪಿಯಿಂದ ದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೂಡ ಅದು ಸದ್ದು ಮಾಡುತ್ತಿದೆ. ಈ ಮಧ್ಯೆ ಆಂಧ್ರಪ್ರದೇಶ ಸರ್ಕಾರವು ವಕ್ಫ್ ಬೋರ್ಡ್ ರದ್ದು ಮಾಡಿದೆ.
ಈಗಾಗಲೇ ಅಲ್ಲಿನ ಸರ್ಕಾರವು ರಾಜ್ಯದಲ್ಲಿನ ವಕ್ಫ್ ಬೋರ್ಡ್ ಆಸ್ತಿಗಳ ರಕ್ಷಣೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ವಕ್ಫ್ ಬೋರ್ಡ್ ಜಮೀನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನ ಮುಂದೆ ತಿದ್ದುಪಡಿ ಮಸೂದೆ ತಂದಿದೆ. ಇದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ಈಗ ಕರ್ನಾಟಕದಲ್ಲಿ ಕೂಡ ವಕ್ಫ್ ರದ್ದುಗೊಳಿಸಬೇಕೆಂದು ಬಿಜೆಪಿ ಹೋರಾಟ ಮಾಡುತ್ತಿದೆ. ರೈತರು ಕೂಡ ಇದಕ್ಕೆ ಧ್ವನಿ ಗೂಡಿಸುತ್ತಿದ್ದು, ಈ ವಿಚಾರ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.