ಭಾರತೀಯ ಕಿರುತೆರೆಯಲ್ಲಿ ಹೊಸ ಶಕೆಯನ್ನೇ ಸೃಷ್ಟಿಸಿದ ಕಾರ್ಯಕ್ರಮವೆಂದರೆ ಅದು ಕೌನ್ ಬನೇಗಾ ಕರೋಡ್ ಪತಿ.
ಮೆಗಾ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮ ದಶಕಗಳೇ ಉರುಳಿದರೂ ತನ್ನ ಛಾಪನ್ನ ಕಳೆದುಕೊಂಡಿಲ್ಲ. ಆದರೆ, ಈ ಶೋದಿಂದ ಅಮಿತಾಬ್ ಹೊರ ನಡೆದಿದ್ದಾರೆ. ಹೀಗಾಗಿಯೇ ಮುಂದಿನ ಸೀಜನ್ 17ನ್ನು ಮುನ್ನಡೆಸೋರು ಯಾರು ಅನ್ನೋ ಕುತೂಹಲ ಇದ್ದೇ ಇದೆ.
ಆದರೀಗ 17ನೇ ಸೀಜನನ್ನು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರೂಪಿಸುವುದು ಬಹುತೇಕ ಪಕ್ಕಾ ಆಗಿದೆ. ಅಮಿತಾಬ್ ರಿಂದ ತೆರವಾದ ಸ್ಥಾನಕ್ಕೀಗ ಸಲ್ಮಾನ್ ಎಂಟ್ರಿಕೊಡೋದು ನಿಶ್ಚಿತವಾಗಿದೆ. ಸೋನಿ ಟಿವಿಯಲ್ಲಿ ಶೀಘ್ರವೇ ಕರೋಡ್ ಪತಿ ಶುರುವಾಗಿದೆ. ಈ ಹಿಂದೆ ಅಮಿತಾಬ್ ಅನುಪಸ್ಥಿತಿಯಲ್ಲಿ ಈ ಶೋವನ್ನು ಬಾಲಿವುಡ್ ಕಿಂಗ್ ಶಾರೂಖ್ ನಿಭಾಯಿಸಿದ್ರು. ಆದ್ರೆ ಈ ಬಾರಿ ಅವಕಾಶ ಸಲ್ಮಾನ್ ಪಾಲಾಗಿದೆ. ಹಾಗಂತಾ ಸಲ್ಮಾನ್ ಈ ಕಾರ್ಯಕ್ರಮಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೀತಿದ್ದಾರೆ ಎನ್ನಲಾಗುತ್ತಿದೆ.