ಬೈಂದೂರು : ಅಂಬೇಡ್ಕರ್ ಮಹಿಳಾ ಸಂಘ (ರಿ.) ವತಿಯಿಂದ ́ಅಕ್ಷರ ಬೆಳಕು ಯೋಜನೆಯಲ್ಲಿ ರತ್ತುಬಾಯಿ ಜನತಾ ಪ್ರೌಢಶಾಲೆಯ 4 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಇಲ್ಲಿನ ವೈದ್ಯೆ ಡಾ. ನಿವೇದಿತಾ ಮಕ್ಕಳಿಗೆ ಆರೋಗ್ಯ ಮಾಹಿತಿಯನ್ನು ನೀಡಿದರು.
ಅಂಬೇಡ್ಕರ್ ಮಹಿಳಾ ಸಂಘ (ರಿ.)ಬೈಂದೂರು ಅಧ್ಯಕ್ಷೆ ಸುಶೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ದ.ಸಂ.ಸ. (ರಿ ) ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಆನಂದ್ ಮದ್ದೋಡಿ, ತಾಲೂಕು ಸಂಚಾಲಕರಾದ ಶಿವರಾಜ್ ಬೈಂದೂರು, ವಿನಯ, ಜಿಲ್ಲಾ ಸಮಿತಿ ಸದಸ್ಯರಾದ ಗೀತಾ ಸುರೇಶ್, ಸುರೇಶ್ ಕುಮಾರ್ ಬಾರ್ಕೂರು, ಮಹಿಳಾ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಆನಂದ್ ಮದ್ದೋಡಿ ಸ್ವಾಗತಿಸಿದರು. ಶಿಕ್ಷಕಿ ಚೈತ್ರಾ ಕಾರ್ಯಕ್ರಮ ನಿರ್ವಹಿಸಿದರು. ಶಕಿಲಾ ವಂದಿಸಿದರು.




















