ಬೆಂಗಳೂರು : 2023ರ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚು ಕ್ಷೇತ್ರಗಳು ನಮ್ಮ ಪಾಲಿಗಾಗಿಲ್ಲ. ನಾವು ಚುನಾವಣಾ ಆಯೋಗವನ್ನು ನಿಂದನೆ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು 136 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಗೆ ಹೇಳಿದ್ದರು ? ಎಂದು ಜೆಡಿಎಸ್ ನಾಯಕ ರಮೇಶ್ ಗೌಡ ಪ್ರಶ್ನಿಸಿದ್ದಾರೆ. ಅಷ್ಟಲ್ಲದೇ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗ ಉತ್ತಮ ಕೆಲಸ ಮಾಡಿದೆ ಎಂದರ್ಥ, ಸೋತರೆ ಚುನಾವಣಾ ಆಯೋಗ ಸರಿಯಾಗಿ ಕೆಲಸ ಮಾಡಿಲ್ಲ ಎಂದರ್ಥವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಮತ ಕಳ್ಳತನ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಮಯ ನಿಗದಿ ಮಾಡಿದ್ದರು. ಎಲ್ಲಿ ದಾಖಲೆ ಸಹಿತ ಬಂದು ಮಾಹಿತಿ ನೀಡುವುದಕ್ಕೆ ಹೇಳಿದ್ದರು. ತನಿಖೆ ನೀವೆ ಮಾಡಿದ್ದೀರಿ. ಅಷ್ಟಾಗಿಯೂ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ನೀಡಿಲ್ಲ ? ಈ ಸಂಬಂಧಿಸಿದಂತೆ ಲೋಕಸಭೆ ಅಧಿವೇಶನದಲ್ಲಿ ರಾಹುಲ್ ಗಾಂಧಿ ಯಾಕೆ ಮಾತಾಡಿಲ್ಲ? ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.
ಬಿಹಾರ ಚುನಾವಣೆ ಇದೆ. ಚುನಾವಣೆಗೊಂದು ಅಸ್ತ್ರ ಬೇಕಿದೆ. ಚುನಾವಣಾ ಆಯೋಗ ಮೊದಲೇ ಹೇಳಿದೆ. ಮತ ಗುರತಿನ ಚೀಟಿಗೆ ಆಧಾರ ಲಿಂಕ್ ಮಾಡುವುದಕ್ಕೆ ಹಿಂದೆ ಮನವಿ ಮಾಡಿದ್ದೇವೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಚಕಾರ ಎತ್ತಿಲ್ಲ. ನೀವು ಅಧಿಕಾರಿದಲ್ಲಿ ಇದ್ದಾಗ ಸಾಕಷ್ಟು ಅಕ್ರಮ ಮಾಡಿ, ಪ್ರಾದೇಶಿಕ ಪಕ್ಷಗಳನ್ನು ಮುಗಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.



















