ಸ್ಯಾಂಡಲ್ ವುಡ್ ನಿರ್ಮಾಪಕ ಸೂರಪ್ಪ ಬಾಬು (Soorappa Babu) ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದೆ.
ಮಹಿಳೆಯೊಬ್ಬರಿಂದ ಸೂರಪ್ಪ ಹಣ ಪಡೆದು ಮರಳಿ ನೀಡದೆ, ವಂಚಿಸಿದ್ದಾರೆಂದು ದೂರು ದಾಖಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಶಿವರಾಜ್ಕುಮಾರ್, ಗಣೇಶ್ ಜೊತೆ ಸಿನಿಮಾ ಮಾಡುವುದಾಗಿ ನಂಬಿಸಿ, ಮಹಿಳೆಯಿಂದ ಸೂರಪ್ಪ ಬಾಬು ಹಣ ಪಡದಿದ್ದರು. ಮರಳಿ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.
ಸೂರಪ್ಪ ಬಾಬು, ‘ಪೃಥ್ವಿ’, ‘ಕೋಟಿಗೊಬ್ಬ 3’ ಸೇರಿದಂತೆ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಸೂರಪ್ಪ ಬಾಬು 92 ಲಕ್ಷ ರೂ. ವಂಚಿಸಿದ್ದಾರೆಂದು ಮಹಿಳೆ ದೂರು ದಾಖಲಿಸಿದ್ದಾರೆ.