ಬೆಂಗಳೂರು : ಇಂದು ವಿಶ್ವಾದ್ಯಂತ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಗರದ ಮಿಲ್ಲರ್ ರಸ್ತೆಯ ಮಸ್ಕಿದ್-ಇ-ಖಾದ್ರಿಯಾದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಇಬ್ರಾಹಿಂ, ಶಾಸಕ ರಿಜ್ವಾನ್ ಅರ್ಷದ್ ಹಲವು ಮುಸ್ಲಿಂ ಧಾರ್ಮಿಕ ಮುಖಂಡರು, ಸಾವಿರಾರು ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು.

ಪ್ರಾರ್ಥನೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ರಂಜಾನ್ ಹಬ್ಬ. ನಾವೆಲ್ಲ ಒಟ್ಟಿಗೆ ಸೇರಿ ಮನುಕೂಲಕ್ಕೆ ಹಾಗೂ ದೇವರಿಗೆ ಪ್ರಾರ್ಥನೆ ಮಾಡಿದ್ದೇವೆ. ನಾವೆಲ್ಲ ಮಾನವರಾಗಿ ಬಾಳೋದು ಅವಶ್ಯ ಹಾಗೂ ನಾವೆಲ್ಲ ಮಾನವೀಯತೆಯಿಂದ ಪ್ರೀತಿ ವಿಶ್ವಾಸದಿಂದ ಇರಬೇಕು. ಅನೇಕ ಸಂಸ್ಕೃತಿ, ಧರ್ಮ ಇದ್ರೂ ಏಕತೆಯಿಂದ ಇರಬೇಕು. ಎಲ್ಲ ಧರ್ಮವೂ ಪ್ರೀತಿಯನ್ನು ಭೋದಿಸುತ್ತದೆ, ದ್ವೇಷವನ್ನಲ್ಲ ಎಂದು ದೇಶದ ಎಲ್ಲ ಮುಸ್ಲಿಂ ಬಾಂಧವರಿಗೆ ಈದ್ ಮುಬಾರಕ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕಳೆಗಟ್ಟಿದ ರಂಜಾನ್
ಚಿಕ್ಕಬಳ್ಳಾಪುರದಲ್ಲಿ ರಂಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಚಿಂತಾಮಣಿ ನಗರದ ಬಾಗೇಪಲ್ಲಿ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಸುಮಾರು ಎಂಟು ಸಾವಿರ ಮುಸಲ್ಮಾನ್ ರಿಂದ ಸಾಮೂಹಿಕ ಪ್ರಾರ್ಥನೆ ಮಾಡಿ, ಪರಸ್ಪರ ಆಲಿಂಗನ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಈ ಸಂಭರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಷರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಇದನ್ನೂ ಓದಿ : ವ್ಯಕ್ತಿಯ ಕತ್ತು ಸೀಳಿ ಆರೋಪಿ ಎಸ್ಕೇಪ್.. ರಕ್ತದ ಮಡುವಲ್ಲಿ ಒದ್ದಾಡ್ತಿದ್ದವನ ಪ್ರಾಣ ಉಳಿಸಿದ ಪೊಲೀಸರು!



















