ಕಲಬುರಗಿ : ಆಳಂದ ಪುರಸಭೆ ಸಭೆಗಳಿಗೆ ಸತತವಾಗಿ ಗೈರಾಗುವ ಮೂಲಕ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 16(2)(ಸಿ) ಉಲ್ಲಂಘನೆ ಮಾಡಿರುವ ಕಾರಣ ಅಧ್ಯಕ್ಷ ಫಿರ್ದೋಸ್ ಅನ್ಸಾರಿಯ ಸದಸ್ಯತ್ವ ರದ್ದು ಮಾಡಲಾಗಿದೆ. ಈ ಬಗ್ಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.

ಶಾಸಕ ಬಿ.ಆರ್ .ಪಾಟೀಲ್ ಗೆ ಆಪ್ತವಾಗಿರುವ ಫಿರ್ದೋಸ್ ಅನ್ಸಾರಿ ಒಂದು ವರ್ಷದ ಹಿಂದೆ ಪುರಸಭೆಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದರು.. ಪುರಸಭೆ ಸಭೆಗಳಿಗೆ ಸತತ ಗೈರು ಹಾಜರಾಗಿದ್ದರು. ಇದೀಗ ಸಾಮಾನ್ಯ ಅರ್ಹತೆಯ ಸದಸ್ಯ ಸ್ಥಾನ ಖಾಲಿಯಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯನಾಗಿರುವ ಫಿರ್ದೋಸ್ ಅನ್ಸಾರಿ ವಿರುದ್ಧ ಹಲವು ಅಪರಾಧ ಪ್ರಕರಣಗಳಿದ್ದು, ಆಳಂದ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ. 2021ರಲ್ಲಿಆಳಂದನ ಲಾಡ್ಲೆಮಶಾಕ್ ದರ್ಗಾ ಬಳಿ ನಡೆದ ಕಲ್ಲು ತೂರಾಟದ ಪ್ರಮುಖ ಆರೋಪಿಯಾಗಿದ್ದ ಫಿರ್ದೋಸ್ ಅನ್ಸಾರಿಯನ್ನು ಗಡಿ ಪಾರು ಮಾಡಿಯೂ ಆದೇಶ ಹೊರಡಿಸಲಾಗಿತ್ತು.
ಇದನ್ನೂ ಓದಿ : ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ | ಯಾರಿಗೆಲ್ಲ ಸ್ಥಾನ?



















