ಬೆಂಗಳೂರು: ಐಶ್ವರ್ಯಗೌಡ ವಂಚನೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿದೆ. ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಐಶ್ವರ್ಯಾಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದವು. ಈಗ ಈ ಪ್ರಕರಣ ಐಟಿ ಅಂಗಳಕ್ಕೆ ಲಗ್ಗೆ ಇಟ್ಟಿದೆ.
ಪ್ರಕರಣದ ತನಿಖಾಧಿಕಾರಿ ಈಗ ಪತ್ರದ ಮೂಲಕ ಐಟಿ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಚಿಚೂ ಮಾಹಿತಿಯನ್ನು ನೀಡಿದ್ದಾರೆ. ಐಶ್ವರ್ಯಗೌಡ ವಿರುದ್ದ ದಾಖಲಾಗಿರುವ ವಂಚನೆ ಪ್ರಕರಣಗಳ ಕುರಿತು ಮಾಹಿತಿ ನೀಡಿದ್ದಾರೆ.
ತನಿಖಾಧಿಕಾರಿ ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳು:
- ಐಶ್ವರ್ಯಗೌಡ ವಿರುದ್ದ ದಾಖಲಾಗಿರುವ ವಂಚನೆ ಪ್ರಕರಣಗಳ ಡಿಟೇಲ್ಸ್
- ತನಿಖಾಧಿಕಾರಿ ಸೀಜ್ ಮಾಡಿರುವ ಹಣ, ಚಿನ್ನಾಭರಣ, ಐಷಾರಾಮಿ ಕಾರುಗಳ ಮಾಹಿತಿ
- ಐಶ್ವರ್ಯಗೌಡ ಕಳೆದ ಮೂರು ವರ್ಷಗಳ ಬ್ಯಾಂಕ್ ವಹಿವಾಟು ವಿವರ
- ಈ ಪೈಕಿ ಎರಡು ವರ್ಷದ ಅವಧಿಯಲ್ಲೇ 70 ಕೋಟಿ ರೂ. ಗೂ ಅಧಿಕ ಹಣ ವರ್ಗಾವಣೆ ಮಾಡಿರುವ ಡಿಟೇಲ್ಸ್