ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ವಯಸ್ಸಿನ ಸಡಿಲಿಕೆ ಮಾಡಿ ಅರ್ಜಿ ಆಹ್ವಾನಿಸಲಾಗಿದೆ.
ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್- ಸಿ ಹಾಗೂ ಗ್ರೂಪ್- ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾದ ಅಧಿಸೂಚನೆಗಳಿಗೆ ಹಾಗೂ ಮುಂದಿನ 1 ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ಮಾಡಿ ಆದೇಶಿಸಲಾಗಿದೆ. ಆದರೆ, ವಯಸ್ಸಿನ ಸಡಿಲಿಕೆ ಈ ಬಾರಿಗೆ ಅನ್ವಯಿಸಲಿದೆ.
ಪಿಡಿಒ ಉಳಿಕೆ ಮೂಲ ವೃಂದದ 150 ಹುದ್ದೆಗಳು, ಹೈದರಾಬಾದ್ ಕರ್ನಾಟಕ ವೃಂದದ 97 ಹುದ್ದೆಗಳು ಸೇರಿದಂತೆ ಒಟ್ಟು 247 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ತೇರ್ಗಡೆಯಾದ ಅಭ್ಯರ್ಥಿಗಳು ಈ ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು- 600 ರೂ., ಇತರೆ ಹಿಂದುಳಿದ ಅಭ್ಯರ್ಥಿಗಳು- 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 50 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳ ವಯೋಮಿತಿ
• ಅರ್ಜಿ ಸಲ್ಲಿಸಲು ಕನಿಷ್ಠ-18 ವರ್ಷಗಳು ಪೂರ್ಣವಾಗಿರಬೇಕು.
• ಸಾಮಾನ್ಯ ವರ್ಗದವರಿಗೆ- 35 ವರ್ಷಗಳು ಬದಲಾಗಿ 38 ವರ್ಷಗಳು ಮಾಡಲಾಗಿದೆ.
• 2ಎ, 2ಬಿ, 3ಎ, 3ಬಿ, 38- 38 ವರ್ಷಗಳು ಇರುವುದನ್ನ 41 ವರ್ಷಕ್ಕೆ ಏರಿಕೆ ಮಾಡಿದೆ.
• ಎಸ್ಸಿ, ಎಸ್ಟಿ, ಪ್ರವರ್ಗ1- 40 ವರ್ಷ ಇದ್ದಿದ್ದನ್ನ 43 ವರ್ಷಕ್ಕೆ ಏರಿಸಲಾಗಿದೆ. ಈ ಹುದ್ದಗೆಳಿಗೆ ಸೆ. 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅ. 3 ಕೊನೆಯ ದಿನವಾಗಿರುತ್ತದೆ. ಕೆಪಿಎಸ್‌ಸಿ ವೆಬ್ಸೈಟ್ https://www.kpsc.kar.nic.in/ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.