ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ನಟಿ ಅವ್ನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಚಟುವಟಿಕೆಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯಾದ ಕೆಲವೇ ದಿನಗಳ ನಂತರ, ಮತ್ತೊಬ್ಬ ಭಾರತೀಯ ಕ್ರಿಕೆಟ್ ತಾರೆಯಾದ ರಿಷಬ್ ಪಂತ್ ಅನಿರೀಕ್ಷಿತ ವಿವಾದವೊಂದಕ್ಕೆ ಸಿಲುಕಿದ್ದಾರೆ.
ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಡುವೆ ಅವರು ಡಿಜಿಟಲ್ ಕ್ರಿಯೇಟರ್‌ಗಳ ಪೋಸ್ಟ್‌ಗಳನ್ನು ಆಗಾಗ್ಗೆ ಲೈಕ್ ಮಾಡುತ್ತಿರುವುದು ಗಮನ ಸೆಳೆದಿದೆ.
ರಿಷಬ್ ಪಂತ್ ಅವರ ಇನ್‌ಸ್ಟಾಗ್ರಾಮ್ ಚಟುವಟಿಕೆ ವೈರಲ್
ರಿಷಬ್ ಪಂತ್ ಅವರು ಡಿಜಿಟಲ್ ಕ್ರಿಯೇಟರ್ ಮತ್ತು ಎಐ ಇನ್‌ಫ್ಲುಯೆನ್ಸರ್ ಆಗಿರುವ ಮಿಯಾ ಝೆಲು ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಆಗಾಗ್ಗೆ ಲೈಕ್ ಮಾಡುತ್ತಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಅವರ ಗ್ಲಾಮರಸ್ ಮತ್ತು ಬೋಲ್ಡ್ ಕಂಟೆಂಟ್ ಆನ್‌ಲೈನ್‌ನಲ್ಲಿ ಭಾರಿ ಗಮನ ಸೆಳೆದಿದೆ. ಇದೀಗ ಭಾರತದ ಟೆಸ್ಟ್ ಉಪನಾಯಕ ಪಂತ್ ಅವರ ಈ ಪೋಸ್ಟ್‌ಗಳೊಂದಿಗಿನ ನಿರಂತರ ಸಂವಹನವು ಹಲವರ ಹುಬ್ಬೇರಿಸಿದೆ.
ರಿಷಬ್ ಪಂತ್ ಅವರ ಇನ್‌ಸ್ಟಾಗ್ರಾಮ್ ಚಟುವಟಿಕೆಗಳ ಸ್ಕ್ರೀನ್‌ಶಾಟ್‌ಗಳು ಅಭಿಮಾನಿ ಪುಟಗಳಲ್ಲಿ ಹರಿದಾಡುತ್ತಿವೆ. ಮಿಯಾ ಝೆಲು ಕೇವಲ AI ಇನ್‌ಫ್ಲುಯೆನ್ಸರ್ ಆಗಿದ್ದು, ಪ್ರಸ್ತುತ 143K ಫಾಲೋವರ್‌ಗಳನ್ನು ಹೊಂದಿದ್ದಾರೆ ಎಂದು ಹಲವು ಅಭಿಮಾನಿಗಳು ಪಂತ್ ಅವರನ್ನು ಟ್ರೋಲ್ ಮಾಡಿದ್ದಾರೆ. ಪಂತ್ ಮಿಯಾ ಝೆಲು ಅವರನ್ನು ಫಾಲೋ ಮಾಡುತ್ತಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ, ಏಕೆಂದರೆ ಅವರು ತಮ್ಮ ಫಾಲೋವರ್‌ಗಳನ್ನು ಗೌಪ್ಯವಾಗಿ ಇರಿಸಿಕೊಂಡಿದ್ದಾರೆ.
ಕೆಲವು ಅಭಿಮಾನಿಗಳು ಎಐ ವ್ಯಕ್ತಿತ್ವದಲ್ಲಿ ಆಸಕ್ತಿ ತೋರಿಸಿದ್ದಕ್ಕಾಗಿ ಎಡಗೈ ಬ್ಯಾಟರ್ ಅನ್ನು ಹೊಗಳಿದರೆ, ವಿರಾಟ್ ಕೊಹ್ಲಿ-ಅವ್ನೀತ್ ಕೌರ್ ವಿವಾದದ ನಂತರ ಪಂತ್ ಅವರ ಈ ಫೋಟೋ-ಷೇರಿಂಗ್ ಪ್ಲಾಟ್‌ಫಾರ್ಮ್‌ನಲ್ಲಿನ ಚಟುವಟಿಕೆಗಾಗಿ ಹಲವು ಅಭಿಮಾನಿಗಳು ಅವರನ್ನು ಟ್ರೋಲ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ-ಅವ್ನೀತ್ ಕೌರ್ ವಿವಾದ ಏನು?
ಕೆಲವು ತಿಂಗಳ ಹಿಂದೆ ವಿರಾಟ್ ಕೊಹ್ಲಿ ನಟಿ ಅವ್ನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಒಂದನ್ನು ಲೈಕ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಅವ್ನೀತ್ ಹಸಿರು ಟಾಪ್ ಮತ್ತು ಪ್ರಿಂಟೆಡ್ ಸ್ಕರ್ಟ್‌ನಲ್ಲಿ ತಮ್ಮ ಕೆಲವು ಸ್ಟೈಲಿಶ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಈ ಚಿತ್ರಗಳನ್ನು ಇಷ್ಟಪಟ್ಟಿದ್ದರೂ, ಕೊಹ್ಲಿ ಅವರ “ಲೈಕ್” ಎಲ್ಲರ ಗಮನ ಸೆಳೆದಿತ್ತು.
ಪೋಸ್ಟ್ ತಕ್ಷಣವೇ ಟ್ರೆಂಡಿಂಗ್ ಆಗಲು ಪ್ರಾರಂಭಿಸಿತು. ಆದರೆ, ನಂತರ ಲೈಕ್ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಅದು ತಪ್ಪಾಗಿ ಆಗಿತ್ತೇ, ತಾಂತ್ರಿಕ ದೋಷವೇ ಅಥವಾ ಬೇರೆ ಏನಾದರೂ ಕಾರಣವೇ ಎಂದು ಅಭಿಮಾನಿಗಳು ಊಹಿಸಲು ಪ್ರಾರಂಭಿಸಿದರು. ಚರ್ಚೆ ಹೆಚ್ಚುತ್ತಿದ್ದಂತೆ, ಕೊಹ್ಲಿ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ಸ್ಪಷ್ಟನೆ ನೀಡಿ ವದಂತಿಗಳಿಗೆ ತೆರೆ ಎಳೆದರು.
ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ನನ್ನ ಫೀಡ್ ಅನ್ನು ಕ್ಲಿಯರ್ ಮಾಡುವಾಗ, ಅಲ್ಗಾರಿದಮ್ ತಪ್ಪಾಗಿ ನೋಂದಾಯಿಸಿರಬಹುದು. ಅದರ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡಬೇಡಿ ಎಂದು ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದರು.