ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಹೀನಾಯ ದಾಖಲೆಯೊಂದನ್ನು ಬರೆದಿದೆ.
ಮೊದಲ ಟೆಸ್ಟ್ ನ ಮೊದಲ ದಿನ ಪಂದ್ಯಕ್ಕೆ ಮಳೆಯ ಕಾಟ ಶುರುವಾಗಿತ್ತು. ಹೀಗಾಗಿ ಮೊದಲ ದಿನ ಕೇವಲ 20.4 ಓವರ್ ಗಳನ್ನು ಮಾತ್ರ ಎಸೆಯಲಾಗಿತ್ತು. ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ 191 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ, ಆಫ್ರಿಕಾ ಬೌಲರ್ ಗಳ ಮಾರಕ ದಾಳಿಗೆ ನಲುಗಿ ಕೇವಲ 42 ರನ್ ಗಳಿಗೆ ಆಲೌಟ್ ಆಗಿದೆ.
ಆಫ್ರಿಕಾ ಬೌಲರ್ ಗಳ ದಾಳಿಗೆ ಮಂಡಿಯೂರಿದ ಸಿಂಹಳೀಯರು ಮೊದಲ ಇನಿಂಗ್ಸ್ ನಲ್ಲಿ ಕೇವಲ 13.5 ಓವರ್ ಗಳನ್ನು ಎದುರಿಸಿ, ಕೇವಲ ಲ್ಲಿ 42 ರನ್ ಗಳಿಗೆ ಸರ್ವಪತನ ಕಂಡಿದೆ. ಆಫ್ರಿಕಾ ಪರ ಮಾರಕ ದಾಳಿ ನಡೆಸಿದ ವೇಗಿ ಮಾರ್ಕೊ ಯಾನ್ಸನ್ ಏಕಾಂಗಿಯಾಗಿ 7 ವಿಕೆಟ್ ಕಬಳಿಸಿದ್ದಾರೆ. ಮಾರ್ಕೊ ಜೆರಾಲ್ಡ್ ಕೊಯೆಟ್ಜಿ ಕೂಡ 2 ವಿಕೆಟ್ ಪಡೆದರೆ, ಕಗಿಸೊ ರಬಾಡ 1 ವಿಕೆಟ್ ಪಡೆದರು.
ಈ ಮೂಲಕ ಕೆಟ್ಟ ದಾಖಲೆ ಬರೆದ ಎರಡನೇ ತಂಡ ಎಂಬ ದಾಖಲೆಗೆ ಶ್ರೀಲಂಕ ಸಾಕ್ಷಿಯಾಗಿದೆ. ಇದಕ್ಕೂ ಮುನ್ನ 1924ರಲ್ಲಿ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 75 ಎಸೆತಗಳಲ್ಲಿ 30 ರನ್‌ಗಳಿಗೆ ಆಲೌಟ್ ಆಗಿತ್ತು. ಅಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವರ್ಷಗಳ ನಂತರ ಈ ಕೆಟ್ಟ ದಾಖಲೆ ಮರುಕಳಿಸಿದೆ.