ಬೆಂಗಳೂರು: ಬಿಎಂಟಿಸಿ ನಿರ್ವಾಹಕನೊಬ್ಬ ಶಾಲಾ ಬಾಲಕನನ್ನು ಕಾಲಿನಿಂದ ಒದ್ದಿರುವ ಘಟನೆ ನಡೆದಿದೆ.
ಇಲ್ಲಿನ ಚಿಕ್ಕಬಿದರಕಲ್ಲು ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಜ. 30ರಂದು ಈ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಸ್ಸಿನಲ್ಲಿ ಪ್ರಯಾಣಿಕರು ಕೂಡ ನಿರ್ವಾಹಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹುಡುಗನೊಬ್ಬ ಶಾಲಾ ಬಸ್ಸು ಹತ್ತಿದ್ದಾನೆ. ಆದರೆ, ಬಸ್ ನಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಆಗ ಕಂಡಕ್ಟರ್ ತನ್ನ ಕಾಲಿನಿಂದ ಆ ಹುಡುಗನಿಗೆ ಒದ್ದಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಆದರೆ, ಕಂಡಕ್ಟರ್ ನಾನು ಮೊಣಕಾಲಿನಲ್ಲಿ ಹುಡುಗನನ್ನು ತಳ್ಳಿದ್ದೇನೆ. ಅದನ್ನು ಕಾಲಿನಿಂದ ಒದ್ದಿರುವುದಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾನೆ. ಆದರೆ, ಪ್ರಯಾಣಿಕರು ಮಾತ್ರ ಒದ್ದಿರುವುದು ನಿಜ ಎಂದಿದ್ದಾರೆ. ಆಗ ಪ್ರಯಾಣಿಕರಿಗೆ ಕಂಡಕ್ಟರ್ ಬೇಕಾದರೆ ದೂರು ನೀಡಿ ಎಂದು ಅರಚಾಡಿದ್ದಾನೆ. ಆದರೆ, ಪ್ರಕರಣದ ಕುರಿತು ದೂರು ದಾಖಲಾಗಿರುವುದು ಮಾತ್ರ ಗೊತ್ತಾಗಿಲ್ಲ.