ಬೆಂಗಳೂರು: ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಬಿಡುಗಡೆಯಾಗಿರುವ ಅಪ್ಪು ಸಿನಿಮಾವನ್ನು ನಟಿ ರಮ್ಯಾ ವೀಕ್ಷಿಸಿದರು.
ನಗರದ ವೀರೇಶ್ ಚಿತ್ರಮಂದಿರದಲ್ಲಿ ವಿನಯ್ ರಾಜ್‌ಕುಮಾರ್, ಶರ್ಮಿಳಾ ಮಾಂಡ್ರೆ ಜೊತೆ ರಮ್ಯಾ ‘ಅಪ್ಪು’ ಸಿನಿಮಾ ವೀಕ್ಷಿಸಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು.
ಪಾರ್ವತಮ್ಮ ರಾಜಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 23 ವರ್ಷಗಳ ನಂತರವೂ ಅಭಿಮಾನಿಗಳು ಖುಷಿಯಿಂದ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ.