ಬೆಂಗಳೂರು: ನಟಿ ರಮ್ಯಾಗೆ ಅಶ್ಲೀಲ ಪದಗಳಿಂದ ನಿಂದಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಮ್ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಅಶ್ಲೀಲ ಪದ ಬಳಸಿ ಕಾಮೆಂಟ್ ಮಾಡಿದ ಕೋಲಾರ ಹಾಗೂ ಚಿತ್ರದುರ್ಗ ಮೂಲದ ಮೂವರನ್ನು ಸಾಮಾಜಿಕ ಜಾಲತಾಣಗಳ ಐಡಿಗಳ ಪರಿಶೀಲನೆ ನಡೆಸಿ ಗುರುತು ಪತ್ತೆ ಮಾಡಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಶ್ಲೀಲ ಕಮೆಂಟ್ ಹಾಕಿ ಸವಾಲು ಹಾಕಿದ್ದ ಕಿಡಿಗೇಡಿಗಳನ್ನು ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆಯೇ ಮೂವರನ್ನು ಸಿಸಿಬಿ ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ ಕಿಡಿಗೇಡಿಗಳ ಪತ್ತೆ ಕಾರ್ಯ ಬಲೆ ಬೀಸಿದ್ದಾರೆ.
ನಟಿ ರಮ್ಯಾ, ಸುಮಾರು 43 ಖಾತೆಗಳ ಮೇಲೆ ದೂರು ನೀಡಿದ್ದಾರೆ. ಇನ್ನಷ್ಟು ಅಕೌಂಟ್ ಗಳ ಪರಿಶೀಲನೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಐಪಿ ಅಡ್ರೆಸ್ ಗಳನ್ನು ಪತ್ತೆ ಹಚ್ಚುವ ಮೂಲಕ ಕಿಡಿಗೇಡಿಗಳಿಗೆ ಬಲೆ ಬೀಸಿದ್ದಾರೆ.