‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ ಎಂಬ ಹಾಡು ಬಿಡುಗಡೆಯಾಗಿದ್ದು, ಕವಿರಾಜ್ ಬರೆದ ಈ ಹಾಡನ್ನು ಉಪೇಂದ್ರ ಮೆಚ್ಚಿಕೊಂಡಿದ್ದಾರೆ.
ಉಪೇಂದ್ರ ಅವರು ಈ ಸಿನಿಮಾದ ಕ್ಲೈಮ್ಯಾಕ್ಸ್ ಕುರಿತು ಮಾತನಾಡಿದ್ದಾರೆ. ‘ನನಗೆ ಮೊದಲು ಈ ಸಿನಿಮಾ ಕ್ಲೈಮ್ಯಾಕ್ಸ್ ಏನು ಎಂಬುದು ಗೊತ್ತಾಯ್ತು. ಇದರ ಕ್ಲೈಮ್ಯಾಕ್ಸ್ ನೋಡಿದ ಕೂಡಲೇ ನಾನು ಚಿತ್ರ ಯಶಸ್ವಿಯಾಗುತ್ತದೆ ಎಂದು ಹೇಳಿದ್ದೇನೆ. ಈಗ ಈ ಸಾಂಗ್ ನೋಡಿದಾಗ ಡಿಸೈಡ್ ಮಾಡಿದೆ. ಶೇಕಡ 100ರಷ್ಟು ಹಿಟ್ ಆಗುತ್ತದೆ ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆಯಲ್ಲಿ ಈ ಕಥೆ ರಚಿಸಲಾಗಿದೆ ಎನ್ನಲಾಗಿದೆ. ರೇಶ್ಮೆ ಬೆಳೆಗಾರನಾಗಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ರಚಿತಾ ರಾಮ್ ಜೋಡಿಯಾಗಿದ್ದಾರೆ. ರಂಗಾಯಣ ರಘು, ತಬಲಾ ನಾಣಿ, ಸಾಧುಕೋಕಿಲ, ಸಂಪತ್, ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಸೇರಿದಂತೆ ಹಲವರು ನಟಿಸಿದ್ದಾರೆ.