ಬೆಂಗಳೂರು: ನಟ ಉಪೇಂದ್ರ ದಂಪತಿಗಳ ಮೊಬೈಲ್ ಹ್ಯಾಕ್ ಪ್ರಕರಣದ ಹಿನ್ನೆಲೆ, ನಿನ್ನೆ( ಸೋಮವಾರ) ಬೆಳಗ್ಗೆ 9:50 ರ ಸುಮಾರಿಗೆ ಪ್ರಿಯಾಂಕ ಮೊಬೈಲ್‌ಗೆ ಫೋನ್ ಬಂದಿದೆ. ನಿಮಗೆ ಒಂದು ಆರ್ಡರ್ ಇದೆ ಆದರೆ ಅಡ್ರೆಸ್ ಗೊತ್ತಾಗ್ತಿಲ್ಲ, ಒಂದು ನಂಬರ್ ಕೊಡುತ್ತೇವೆ. ಅದಕ್ಕೆ ಡಯಲ್ ಮಾಡಿ ಎಂದು ಪ್ರಿಯಾಂಕಾಗೆ ಹ್ಯಾಕರ್ 1219279295167# ಈ ನಂಬರ್ ಕೊಟ್ಟಿದ್ದಾನೆ. ಪ್ರಿಯಾಂಕಾ ಮೊಬೈಲ್ ಅಲ್ಲಿ ಕನೆಕ್ಟ್ ಆಗ್ತಿಲ್ಲ ಎಂದು ಉಪೇಂದ್ರ ಮೊಬೈಲ್ ನಿಂದ ಕರೆ ಮಾಡಿದ್ದಾರೆ.
ಅದಾಗಲೇ ಪ್ರಿಯಾಂಕ ಮೊಬೈಲ್ ಅನ್ನು ಹ್ಯಾಕರ್ ಹ್ಯಾಕ್ ಮಾಡಿದ್ದಾನೆ, ಉಪೇಂದ್ರ, ಪ್ರಿಯಾಂಕಾ ಹಾಗೂ ಮಹಾದೇವ್ ಎನ್ನುವವರ ಮೊಬೈಲ್ ಕೂಡ ಹ್ಯಾಕ್ ಮಾಡಿದ್ದಾನೆ. ಮೂವರಿಗೂ ಬರೋ ಫೋನ್ ಗಳನ್ನು ತನಗೆ ಫಾರ್ವರ್ಡ್ ಮಾಡಿಕೊಂಡಿದ್ದಾನೆ. ಪ್ರಿಯಾಂಕ ವಾಟ್ಸ್ ಆ್ಯಪ್ ಅನ್ನು ತನ್ನ ಸಿಸ್ಟಮ್ ನಲ್ಲಿ ಲಾಗಿನ್ ಮಾಡಿಕೊಂಡು. ಪ್ರಿಯಾಂಕಾಗೆ ಬಂದ ಮೆಸೇಜ್ ಮತ್ತು ಕಾಲ್ ಟ್ರ್ಯಾಕ್ ಮಾಡಿದ್ದಾನೆ. ಪ್ರಿಯಾಂಕ ದಿನನಿತ್ಯ ಕಾಂಟ್ಯಾಕ್ಟ್ ಇರೋರಿಗೆ ಮಾತ್ರ ಹಣಕ್ಕಾಗಿ ಮೆಸೇಜ್ ಮಾಡಿದ್ದಾನೆ. ನನಗೆ ಸ್ವಲ್ಪ ಸಹಾಯ ಬೇಕಿದೆ ಅರ್ಜೆಂಟ್ ನಲ್ಲಿ ಇದ್ದೀನಿ ಎಂದು ಮೆಸೇಜ್ ಕಳುಹಿಸಿ ನಿಮ್ಮ ಬಳಿ 55 ಸಾವಿರ ಹಣ ಇದ್ದಲ್ಲಿ ಕಳಿಸಿ 2 ಗಂಟೆಯಲ್ಲಿ ಕೊಡ್ತೀನಿ. ನನ್ನ ಬಳಿ ಇರೋ UPI ಆ್ಯಪ್ ಯಾವ್ದು ಸರಿಯಾಗಿ ವರ್ಕ್ ಆಗ್ತಾ ಇಲ್ಲ ಎಂದು ಒಂದು ನಂಬರ್ ಸೆಂಡ್ ಮಾಡಿ ಪೇಮೆಂಟ್ ಸ್ಕ್ರೀನ್ ಶಾಟ್ ಕೇಳಿದ್ದಾನೆ. ಅದರಂತೆ ಪ್ರಿಯಾಂಕ ಪುತ್ರ ಸೇರಿದಂತೆ ಕೆಲ ಆಪ್ತರು ಹಣ ಕಳಿಸಿದ್ದಾರೆ. ಎಲ್ಲರಲ್ಲಿಯೂ ಬಹುತೇಕ 55 ಸಾವಿರ ಹಣಕ್ಕಾಗಿ ಹ್ಯಾಕರ್ ಮೆಸೇಜ್ ಮಾಡಿದ್ದಾನೆ.
ಇನ್ನು ಬಿಹಾರದ ನಳಂದಾ ಮೂಲದ ಒಂದು ಅಕೌಂಟ್ ಗೆ ಹಣ ವರ್ಗಾವಣೆ ಆಗಿದೆ ಎನ್ನಲಾಗಿದೆ. ವಿಕಾಸ್ ಕುಮಾರ್ ಎನ್ನುವವರ ಅಕೌಂಟ್ ಗೆ ಹಣ ವರ್ಗಾವಣೆ ಆಗಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಆಗಿರೋ ಮಾಹಿತಿ ಬಂದಿದೆ. ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಹಣಕ್ಕಾಗಿ ಮೆಸೇಜ್ ಹೋಗಿರುವ ಮಾಹಿತಿ. ಇದುವರೆಗೆ ಪ್ರಿಯಾಂಕ,ಉಪೇಂದ್ರ ಅಕೌಂಟ್ ನಿಂದ ಹಣ ಡೆಬಿಟ್ ಆಗಿಲ್ಲ. ಪ್ರಿಯಾಂಕ ನಂಬರ್ ಹ್ಯಾಕರ್ ಪಡೆದಿದ್ದರ ಬಗ್ಗೆ ಮಾಹಿತಿ ಕಲೆಗೆ ಕ್ರೈಮ್ ಪೊಲೀಸರು ಯತ್ನಿಸುತ್ತಿದ್ದಾರೆ. ಆನ್ಲೈನ್ ಆರ್ಡರ್ ಪ್ಲ್ಯಾಟ್ ಫಾರ್ಮ್ ಅಲ್ಲೇ ಪಡೆದಿದ್ದಾರಾ..?ಅಥವಾ ರ್ಯಾಂಡಮ್ ಆಗಿ ನಂಬರ್ ಪಡೆದಿದ್ದಾರಾ ಎಂದು ಪರಿಶೀಲನೆ ನಡೆಸುತ್ತಿದ್ದು, ಯರ್ಯಾರಿಗೆ ಮೆಸೇಜ್ ಹೋಗಿದೆ ಎಂದು ಪೊಲೀಸರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.


















