ಮೈಸೂರು: ನಟ, ನಿರ್ದೇಶಕ ಪ್ರಭುದೇವ ತಮ್ಮ ತಾಯಿಯ ಆಸೆ ಈಡೇರಿಸಿದ್ದಾರೆ.
ನಟ ಪ್ರಭುದೇವ್ ತಮ್ಮ ತಾಯಿಯ ಆಸೆಯಂತೆ ಹುಟ್ಟೂರಿನಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ. ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದಲ್ಲಿನ ಮಹದೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ಭಾಗಿಯಾಗಿ ತಾಯಿಯ ಕನಸನ್ನು ಈಡೇರಿಸಿದ್ದಾರೆ.
ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ನಡೆದಿದ್ದ ಹೋಮ ಹವನ ಪೂಜೆ ಪುನಸ್ಕಾರದಲ್ಲಿ ಪ್ರಭುದೇವ ಕುಟುಂಬಸ್ಥರು ಭಾಗಿಯಾಗಿದ್ದರು. ಪ್ರಭುದೇವ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



















