ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Darshan) ಅನಾರೋಗ್ಯದ ಹಿನ್ನೆಲೆಯಲ್ಲಿ ಬೇಲ್ ಮೇಲೆ ಹೊರ ಬಂದಿದ್ದಾರೆ. ಈ ಮಧ್ಯೆ ಬೇಲ್ ರದ್ದು ಮಾಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಈಗ ದರ್ಶನ್ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಆತಂಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಈ ವಾರದಲ್ಲೇ ನಟ ದರ್ಶನ್ ಗೆ ಆಪರೇಷನ್ ಆಗಲಿದೆ ಎನ್ನಲಾಗುತ್ತಿದೆ. ಆಪರೇಷನ್ ಮಾಡುವುದಕ್ಕೆ ವೈದ್ಯರು ಮನವೊಲಿಸಿದ್ದಾರೆ ಎನ್ನಲಾಗಿದೆ. ಆಪರೇಷನ್ ಮಾಡಿದರೆ ರಿಕವರಿ ಆಗಲು ಸಮಯ ಹಿಡಿಯುತ್ತದೆ. ಹೀಗಾಗಿ ಕೋರ್ಟ್ ನಲ್ಲಿ ಮತ್ತಷ್ಟು ಸಮಯ ಕೇಳಬೇಕಾಗುತ್ತದೆ ಎಂದಿದ್ದಾರೆ.
ಬೆನ್ನು ಮೂಳೆಗಳ ಮಧ್ಯೆ ತೇವಾಂಶದ ಭಾಗ ಇರುತ್ತದೆ. ಆ ತೇವಾಂಶದ ಭಾಗ ಬೆನ್ನು ಮೂಳೆಗಳಿಂದ ಹೊರಗಡೆ ಬಂದು ಮೂಳೆಗಳಿಗೆ ಒತ್ತಡ ಆಗುತ್ತದೆ. ಒತ್ತಡ ಹಾಕಿದಾಗ ನೋವು ಬರುತ್ತದೆ. ವೈದ್ಯರು ಹೊರಗಡೆ ಬಂದಿರುವ ತೇವಾಂಶದ ಭಾಗವನ್ನು ಸರ್ಜರಿ ಮಾಡಲಿದ್ದಾರೆ. ಡಿಸ್ಕ್ ಆಪರೇಷನ್ ಮಾಡಿದರೆ ರಾಡ್ ಅಳವಡಿಕೆ ಮಾಡುವುದಿಲ್ಲ ಎನ್ನಲಾಗತ್ತಿದೆ.
ಬೆನ್ನು ಮೂಳೆಗಳು ಒಂದಕ್ಕೊಂದು ಮುಂದೆ ಬಾಗಿರುತ್ತವೆ. ಬೆನ್ನುಮೂಳೆ ಹೊರಗಡೆ ಬಂದಾಗ ನೋವು ಜಾಸ್ತಿ ಕಾಣಿಸುತ್ತದೆ. ಹೊರಗಡೆ ಬಂದಿರುವ ಬೆನ್ನುಮೂಳೆಗೆ ಆಪರೇಷನ್ ಮಾಡಿ ರಾಡ್ ಅಳವಡಿಕೆ ಮಾಡಬೇಕಾಗುತ್ತದೆ ಎಂದಿದ್ದಾರೆ.