ಮಂಗಳೂರು: ಥೈಲ್ಯಾಂಡ್ ನಲ್ಲಿ ಕೊಲೆ ಆರೋಪಿ ಬಿಪಿನ್ ರೈ ಎಂಬಾತನ ಬರ್ತ್ ಡೇ ಪಾರ್ಟಿಯಲ್ಲಿ ನಟ ದರ್ಶನ್ ಭಾಗವಹಿಸಿರುವ ಫೋಟೊ ಮತ್ತು ವಿಡೀಯೊ ವೈರಲ್ ಆಗಿದೆ.
ಬಿಪಿನ್ ರೈ, ಮಂಗಳೂರು ಮೂಲದ ಥೈಲ್ಯಾಂಡ್ ನ ಉದ್ಯಮಿ, ಮಂಗಳೂರಿನಲ್ಲಿ ಅಕ್ಟೋಬರ್ 7,2014ರಂದು ನಡೆದಿದ್ದ ಕೊಲೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಆರೋಪಿ.
ಆಗ ಮಂಗಳೂರಿನ ಪಂಪ್ವೆಲ್ ನಲ್ಲಿ ಯಶೋಧಾ ಕೃಷ್ಣ ಎಂಬಾ ಸಂಸ್ಥೆ ಹೆಸರಲ್ಲಿ ಫೈನಾನ್ಸ್ ನಡೆಸುತ್ತಿದ್ದ, ಬಿಪಿನ್ ನಿಂದ ಫೈನಾನ್ಸ್ ನಲ್ಲಿ ಅಬ್ದುಲ್ ಹಮೀದ್ ಹಣ ಪಡೆದು, ಹಣ ನೀಡದೇ ಸತಾಯಿಸಿರುವುದಕ್ಕೆ ಸುಪಾರಿ ನೀಡಿ ಹರೀಶ್ ಮತ್ತು ಅಭಿಶೇಕ್ ಅವರಿಂದ ಹಮೀದ್ ನನ್ನು ಕೊಲೆ ಮಾಡಿಸಿದ್ದ.
ವಿಚಾರಣೆ ವೇಳೆ ಬಿಪಿನ್ ಸುಪಾರಿ ನೀಡಿರುವುದಕ್ಕೆ ಕೊಲೆ ಮಾಡಿರುವುದಾಗಿ ಹಂತಕರು ತಿಳಿಸದ ಬಳಿಕ, ಪೊಲೀಸರು ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಬಿಪಿನ್ ವಿದೇಶಕ್ಕೆ ಎಸ್ಕೇಪ್ ಆಗಿದ್ದ.
ಮಂಗಳೂರು ಗ್ರಾಮಾಂತರ ಪೊಲೀಸರಿಂದ ಲುಕ್ ಔಟ್ ನೊಟೀಸ್ ಜಾರಿ ಮಾಡಲಾಗಿತ್ತು.
2015 ರ ಜೂನ್ 29 ರಂದು ಬಿಪಿನ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಈ ವೇಳೆ ಇಮಿಗ್ರೇಷನ್ ಅಧಿಕಾರಿಗಳಿಂದ ಮಾಹಿತಿ ಪಡೆದ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧನಕ್ಕೆ ಒಳಪಡಿಸಿದ್ದರು.
ಬಿಪಿನ್ ರೈ ಕೊಲೆ ಪ್ರಕರಣ ಸಂಬಂಧದಲ್ಲಿ ಜೈಲು ಶಿಕ್ಷೆ ಅನುಭವಿಸಿ ಆ ಬಳಿಕ ಥೈಲ್ಯಾಂಡ್ ನಲ್ಲಿ ಉದ್ಯಮ ನಡೆಸುತ್ತಿದ್ದಾನೆ.