ಚೆನ್ನೈ: ತಮಿಳು ಸೂಪರ್ ಸ್ಟಾರ್ ಅಜಿತ್ (Ajith) ಸಿನಿಮಾ ರಂಗದಲ್ಲಿ ಸಾಧನೆ ಮಾಡುವ ಜೊತೆಗೆ ಕಾರು ರೇಸಿಂಗ್‌ನಲ್ಲೂ ಚಾಂಪಿಯನ್. ಇತ್ತೀಚೆಗೆ ಅವರು ದುಬೈನಲ್ಲಿ ನಡೆದ ಕಾರು ರೇಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದರ ಜತೆಗೆ ಅವರಿಗೆ ಇನ್ನೊಂದು ಸಂತಸದ ವಿಷಯವಿದೆ. ಅಜಿತ್ ಅವರ ಪುತ್ರ ಅದ್ವಿಕ್ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಥ್ಲೆಟಿಕ್ಸ್ ಪದಕಗಳನ್ನು ಗೆಲ್ಲುವ ಮೂಲಕ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾನೆ. ಅದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಟ ಅಜಿತ್ ಅವರ ಪತ್ನಿ ನಟಿ ಶಾಲಿನಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಅಪ್ಲೋಡ್ ಮಾಡಿದ್ದಾರೆ. ಮಗ ಅದ್ವಿಕ್ ಅವರು ರೇಸ್(ಓಟ)ದಲ್ಲಿ ಗೆಲ್ಲುವ ವಿಡಿಯೊ ಅದಾಗಿದೆ.
ನಟಿ ಶಾಲಿನಿ ಅವರು ಅಪ್ಲೋಡ್ ಮಾಡಿದ್ದ ವಿಡಿಯೊದಲ್ಲಿ ಅದ್ವಿಕ್ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಬಳಿಕ ರಿಲೆ ಓಟದಲ್ಲಿ ಕೂಡ ಛಲ ಬಿಡದೆ ಓಡಿ ಪ್ರಥಮ ಸ್ಥಾನ ಪಡೆದಿದ್ದಾನೆ. ಹೀಗೆ ಮೂರು ಪ್ರಶಸ್ತಿ ಗೆದ್ದಿದ್ದಾನೆ
ದೆ ಒಂದು ಕಡೆ ಕಾರ್ ರೇಸ್‌ನಲ್ಲಿ ಮಿಂಚುತ್ತಿರುವಾಗ, ಈಗ ಪುತ್ರ ಕೂಡ ರೇಸ್‌ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗೆದ್ದಿರುವುದು ಅವರ ಕುಟುಂಬಕ್ಕೆ ಖುಷಿಯ ವಿಚಾರವೇ ಸರಿ. ನೋಡಿದ ಕೆಲವರು ಜೂನಿಯರ್ ಸೂಪರ್ ಸ್ಟಾರ್ ಎಂದು ಕರೆದಿದ್ದಾರೆ. ಕೆಲವರು ಡಿಸ್ನಿಯ ಹಾಲಿವುಡ್ ಸಿನಿಮಾ ʼದಿ ಲಯನ್ ಕಿಂಗ್ʼ ನ ಮುಫಾಸಾ ಮತ್ತು ಅವನ ಮಗ ʼಸಿಂಬಾʼನಿಗೆ ತಂದೆ ಮಗನನ್ನು ಹೋಲಿಸಿ ಕಮೆಂಟ್ ಮಾಡಿದ್ದಾರೆ.
ರೇಸ್‌ನಲ್ಲಿ ಗೆದ್ದಿರುವ ಅಜಿತ್
ನಟ ಅಜಿತ್ ಅವರಿಗೆ ಕಾರ್ ರೇಸಿಂಗ್‌ನಲ್ಲಿ ಬಹಳಷ್ಟು ಆಸಕ್ತಿ. ಇತ್ತೀಚೆಗಷ್ಟೇ ದುಬೈ 24 ಅವರ್ಸ್ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗಿ ಮೂರನೇ ಸ್ಥಾನ ಪಡೆದಿದ್ದಾರೆ. ಮಗ ಅದ್ವಿಕ್ ಕೇವಲ 9ನೇ ವಯಸ್ಸಿಗೆ ಕಾರ್ ರೇಸಿಂಗ್‌ನಲ್ಲಿ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಚೈನೈನಲ್ಲಿ ಗೋ ಕಾರ್ಟ್ ಮಕ್ಕಳ ಕಾರ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ತಂದೆ ಮತ್ತು ಮಗನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.