ಬೆಂಗಳೂರು: ನಟ ಅಜಯ್ ರಾವ್ ಹಾಗೂ ಪತ್ನಿ ಸಪ್ನಾ ದೂರವಾಗಲು ನಿರ್ಧರಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಈಗ ಮತ್ತೆ ಪತಿ-ಪತ್ನಿ ಒಂದಾಗಲು ಬಯಸಿದ್ದಾರೆ ಎನ್ನಲಾಗಿದೆ.
ಕೌಟುಂಬಿಕ ಕಲಹದ ಬಗ್ಗೆ ಪತ್ನಿ ಸಪ್ನ ಸ್ಪಷ್ಟನೆ ನೀಡಿದ್ದು, ನಾನು ತಾಯಿಯಾಗಿ ಪ್ರತಿದಿನ ನನ್ನ ಮಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ನಾನು ತೀವ್ರವಾಗಿ ಸವಾಲುಗಳನ್ನು ಎದುರಿಸುತ್ತಿದ್ದೇನೆ.
ನಾನು, ನನ್ನ ಮಗಳು ನಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು ಮತ್ತು ದಾಂಪತ್ಯ ಜೀವನವನ್ನು ಸರಿಪಡಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದೇನೆ. ಇದು ನಮ್ಮ ವೈಯಕ್ತಿಕ, ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಹೊಂದಾಣಿಕೆ ಜೀವನ ನಡೆಸಲು ಅಜಯ್ ರಾವ್ ದಂಪತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.