ಬೆಂಗಳೂರು: ಕ್ಷಮೆ ಕೇಳುವುದಿಲ್ಲ ಎಂಬ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದ್ದಾರೆ.
ಕ್ಷಮೆ ಕೇಳುವವರೆಗೂ ನಾವು ಬಿಡುವುದಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳಲಿಲ್ಲ ಅಂದರೆ ನಾವು ಬಿಡುವುದಿಲ್ಲ. ನಾವು ಕನ್ನಡಿಗರು. ಕನ್ನಡದ ವಿಚಾರದಲ್ಲಿ ಯಾರೇ ವಿರೋಧ ಮಾಡಿದರೂ ಸಹಿಸಿಕೊಳ್ಳುವುದಿಲ್ಲ. ಈಗಾಗಲೇ ಅವರಿಗೆ ಎರಡು ದಿನ ಸಮಯಾವಕಾಶ ಕೊಟ್ಟಿದ್ದೇವೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದೇನೆ. ಅವರು ಕ್ಷಮೆ ಕೇಳಲಿಲ್ಲ ಅಂದರೆ ನಾವು ಅನಿವಾರ್ಯವಾಗಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಬ್ಯಾನ್ ಮಾಡುತ್ತೇವೆ ಎಂದಿದ್ದಾರೆ.



















