ಮೈಸೂರು: ಬಸ್ ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೈಸೂರು- ಹುಣಸೂರು ರಸ್ತೆ ಪಡುವಾರಹಳ್ಳಿ ಜಂಕ್ಷನ್ ಹತ್ತಿರ ಈ ಘಟನೆ ನಡೆದಿದೆ. ಗೋಕುಲಂ ನಿವಾಸಿ ಕಾರ್ತಿಕ್ (27) ಸಾವನ್ನಪ್ಪಿರುವ ವ್ಯಕ್ತಿ ಎನ್ನಲಾಗಿದೆ. ಬೈಕ್ ನಲ್ಲಿ ಕಾರ್ತಿಕ್ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಕೆಳಗೆ ಬಿದ್ದ ಕಾರ್ತಿಕ್, ತಲೆಗೆ ತೀವ್ರ ಪೆಟ್ಟು ಬಿದ್ದಿದೆ.
ಹೆಲ್ಮಿಟ್ ಹಾಕಿ ಸ್ಟ್ರಿಪ್ ಹಾಕದ ಹಿನ್ನೆಲೆಯಲ್ಲಿ ಅಪಘಾತವಾಗುತ್ತಿದ್ದಂತೆ ಹೆಲ್ಮೆಟ್ ರಕ್ಷಣೆ ಮಾಡಿಲ್ಲ. ಗಾಯಗೊಂಡಿದ್ದ ಕಾರ್ತಿಕ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮೈಸೂರು ವಿವಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.