ನವದೆಹಲಿ: ಮಹಾ ಕುಂಭಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾರಂಭವಾಗಿ ಸಮಾಪ್ತಿಗೊಂಡಿದ್ದು ಈ ಕಾರ್ಯಕ್ರಮ ಹಲವರನ್ನು ಜನಪ್ರಿಯಗೊಳಿಸಿದೆ. ಈ ಪೈಕಿ ಅಭಯ್ ಸಿಂಗ್, ಅರ್ಥಾತ್ ‘ಐಐಟಿ ಬಾಬಾ’ ಕೂಡ ಒಬ್ಬರು. ಅವರ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಮೆಚ್ಚುಗೆ ಮತ್ತು ಟೀಕೆಯನ್ನು ಒಟ್ಟಿಗೇ ಆಕರ್ಷಿಸಿತ್ತು. ಯಾಕೆಂದರೆ ಅವರ ಖ್ಯಾತಿಯೇ ಮುಖ್ಯ ಆಕರ್ಷಣೆಯಾಗಿತ್ತು. ಇತ್ತೀಚೆಗೆ, ಅವರನ್ನು ಉತ್ತರ ಪ್ರದೇಶದ ನೊಯ್ಡಾದ ಟಿವಿ ಚರ್ಚೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ಅವರ ಹಲ್ಲೆ ನಡೆದಿದೆ.
ಟಿವಿ ಚರ್ಚೆ ನಡೆಯುತ್ತಿದ್ದಾಗ, ಕೇಸರಿ ಬಟ್ಟೆ ಧರಿಸಿದ ಜನರ ಗುಂಪೊಂದು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅವರ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಚರ್ಚೆ ವೇಳೆ ಸಿಂಗ್ ಮತ್ತು ಆ ಗುಂಪಿನ ನಡುವೆ ವಾಗ್ವಾದ ಉಂಟಾಗಿದ್ದು, ಪರಿಸ್ಥಿತಿ ಬಿಗಡಾಯಿಸಲು ಆರಂಭವಾಯಿತು. ಸಿಂಗ್ ಕೂಡಾ ತಮ್ಮ ಫೋನ್‌ನಲ್ಲಿ ಈ ಘಟನೆ ಚಿತ್ರೀಕರಿಸಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಭಯ್ ಸಿಂಗ್, ಸನ್ಯಾಸಿಗಳನ್ನು ಹಾಗೂ ಸನಾತನ ಧರ್ಮವನ್ನು ಅವಮಾನಿಸಿದ್ದಾಗಿ ಆರೋಪ ಮಾಡಲಾಗಿದೆ. ಗುಂಪಿನ ಸದಸ್ಯರಲ್ಲಿ ಒಬ್ಬರು “ಈ ವ್ಯಕ್ತಿಗೆ ಚಿಕಿತ್ಸೆ ಬೇಕು, ಅವರು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ. ಅವರು ನಿಜವಾಗಿಯೂ ಸಂತರೇ ಎಂಬುದು ಅನುಮಾನ ಎಂದು ಹೇಳುವುದು ವಿಡಿಯೊದಲ್ಲಿ ಕೇಳಿ ಬಂದಿದೆ.
ಭಾರತ ಸೋಲುತ್ತದೆ ಎಂದು ಬಾಬಾ!
ಅಭಯ್ ಸಿಂಗ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲುತ್ತದೆ ಎಂದು ಹೇಗೆ ಹೇಳಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ಈ ಹಿಂದೆ, 2025ರ ಫೆಬ್ರವರಿ 23ರಂದು, ಭಾರತವು ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಆತಿಥೇಯ ಪಾಕಿಸ್ತಾನ ವಿರುದ್ಧ ಭಾರತ ತಂಡ ಕ್ರಿಕೆಟ್ ಪಂದ್ಯವಾಡಲು ಸಜ್ಜಾಗುತ್ತಿದ್ದಾಗ, ಸಿಂಗ್ ಒಂದು ವೀಡಿಯೋ ಪೋಸ್ಟ್ ಮಾಡಿ “ಭಾರತ ಸೋಲುತ್ತದೆ” ಎಂದು ಹೇಳಿದ್ದರು.
ವಿಡಿಯೊ ಗಲಾಟೆ ವೇಳೆ ಈ ಘಟನೆಯನ್ನೂ ಆರೋಪಿಸಲಾಯಿತು. ಅಭಯ್ ಸಿಂಗ್ “ಪಾಕಿಸ್ತಾನದ ಏಜೆಂಟ್” ಎಂದು ಆರೋಪಿಸಿದರು. ಅವರ ಪಾಖಂಡಿ (hypocrite) ನಡವಳಿಕೆ ಉಳ್ಳವರು ಎಂದು ಉಳಿದವರು ಆರೋಪಿಸಿದರು.
ಅಭಯ್ ಸಿಂಗ್ ಪ್ರತಿಕ್ರಿಯೆ
ಘಟನೆಯ ಬಗ್ಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ತನಿಖೆ ಆರಂಭಿಸಲಾಗಿದೆ ಎಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಅಭಯ್ ಸಿಂಗ್ ಅವರ ಅಭಿಪ್ರಾಯ ಮತ್ತು ವೀಡಿಯೋಗಳು ಕೇವಲ ಕೆಲವು ದಿನಗಳಲ್ಲಿ ವೈರಲ್ ಆಗಿವೆ, ಅವರು ತಮ್ಮ ವ್ಲಾಗ್‌ಗಳನ್ನು ನಿರಂತರವಾಗಿ ಅಪ್‌ಡೇಟ್ ಮಾಡುತ್ತಿದ್ದಾರೆ. ಅವರು ಬಹಳಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ.