ಬೆಂಗಳೂರು: ವಿಶೇಷ ಚೇತನ ವಿದ್ಯಾರ್ಥಿಗಳಿಗೆ ನೆರವಾಗುವ ದಿಸೆಯಲ್ಲಿ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (AHFL) ಸಂಸ್ಥೆಯು ಮಹತ್ವದ ವಿದ್ಯಾರ್ಥಿ ವೇತನ (Aadhar Kaushal Scholarship Program 2025-26) ಯೋಜನೆ ಘೋಷಣೆ ಮಾಡಿದೆ. ಹೌದು, ಎಎಚ್ಎಫ್ಎಲ್ ಸಂಸ್ಥೆಯು 2025-26ನೇ ಸಾಲಿನಲ್ಲಿ ಆಧಾರ್ ಕೌಶಲ್ ಸ್ಕಾಲರ್ ಶಿಪ್ ಯೋಜನೆಯನ್ನು ಘೋಷಣೆ ಮಾಡಿದ್ದು, ವಿಶೇಷ ಚೇತನ ವಿದ್ಯಾರ್ಥಿಗಳಿಗೆ 50 ಸಾವಿರ ರೂಪಾಯಿವರೆಗೆ ಸ್ಕಾಲರ್ ಶಿಪ್ ನೀಡುತ್ತಿದೆ.
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
- ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು
- ಶೇ.40ರಷ್ಟು ದೈಹಿಕ ಅಂಗವೈಕಲ್ಯರಾಗಿರಬೇಕು, ವೈದ್ಯಕೀಯ ದಾಖಲೆ ನೀಡಬೇಕು
- 9ನೇ ತರಗತಿಯಿಂದ ವೃತ್ತಿಪರ ಕೋರ್ಸ್ ಅಧ್ಯಯನ ಮಾಡುತ್ತಿರಬೇಕು
- ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರಬೇಕು
- ಹಿಂದಿನ ಶೈಕ್ಷಣಿಕ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು.
ಯಾರಿಗೆ ಎಷ್ಟು ಸ್ಕಾಲರ್ ಶಿಪ್
9 ಹಾಗೂ 10ನೇ ತರಗತಿ ಓದುತ್ತಿರುವವರಿಗೆ 10 ಸಾವಿರ ರೂಪಾಯಿ, ಪಿಯುಸಿ ವಿದ್ಯಾರ್ಥಿಗಳಿಗೆ 15 ಸಾವಿರ ರೂಪಾಯಿ, ಸಾಮಾನ್ಯ ಪದವಿ ಅಧ್ಯಯನ ಮಾಡುತ್ತಿರುವವರಿಗೆ 20 ಸಾವಿರ ರೂಪಾಯಿ ಹಾಗೂ ಬಿಇ, ಎಂಬಿಬಿಎಸ್ ನಂತಹ ವೃತ್ತಿಪರ ಕೋರ್ಸ್ ಅಧ್ಯಯನ ಮಾಡುತ್ತಿರುವವರಿಗೆ 50 ಸಾವಿರ ರೂಪಾಯಿ ಸ್ಕಾಲರ್ ಶಿಪ್ ನೀಡಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಸಲು ಬಯಸುವವರು https://www.buddy4study.com/ ಗೆ ಭೇಟಿ ನೀಡಬೇಕು. ಮೊಬೈಲ್ ನಂಬರ್, ಒಟಿಪಿ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಆಧಾರ್ ಕೌಶಲ್ ಸ್ಕಾಲರ್ ಶಿಪ್ ಯೋಜನೆಯನ್ನುಆಯ್ಕೆ ಮಾಡಿಕೊಳ್ಳಬೇಕು. ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ: ಕೇಂದ್ರ ಸರ್ಕಾರದ BHELನಲ್ಲಿ 10 ಹುದ್ದೆಗಳ ನೇಮಕಾತಿ | 1 ಲಕ್ಷ ರೂಪಾಯಿ ಸ್ಯಾಲರಿ



















