
ಇತ್ತೀಚೆಗೆ ಸಣ್ಣ ಸಣ್ಣ ವಿಚಾರಕ್ಕೂ ಮನಸ್ತಾಪಗಳು ನಡೆಯುತ್ತಿವೆ. ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಗೆಳತಿಯೊಬ್ಬಳು ತನ್ನ ಪ್ರಿಯಕರನ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾಳೆ.
ನ್ಯೂಯಾರ್ಕ್ ಪೋಸ್ಟ್ ಮಾಡಿರುವ ವರದಿಯಂತೆ, ಈ ಘಟನೆ ನಡೆದಿರುವುದು ನ್ಯೂಜಿಲೆಂಡ್ ನಲ್ಲಿ ಎನ್ನಲಾಗಿದೆ. ಯುವತಿಯೊಬ್ಬಳು ತನ್ನ ಪ್ರಿಯಕರ ತನ್ನನ್ನು ವಿಮಾನ ನಿಲ್ದಾಣಕ್ಕೆ ಬಿಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಕೇಸ್ ದಾಖಲಿಸಿದ್ದಾಳೆ. ಅಲ್ಲದೇ, ಆತನಿಂದಾಗಿ ತನ್ನ ಫ್ಲೈಟ್ ಮಿಸ್ ಆಯ್ತು, ಇದಲ್ಲದೇ ಮರುದಿನ ಬೇರೆ ಫ್ಲೈಟ್ ನಲ್ಲಿ ಹೋಗಲು ಹೆಚ್ಚುವರಿ ಹಣ ಖರ್ಚು ಮಾಡಬೇಕಾಯಿತು ಎಂದು ದೂರಿದ್ದಾಳೆ.

ಅಲ್ಲದೇ, ಆರು ವರ್ಷಗಳ ಸಂಬಂಧವನ್ನು ಮುರಿದುಕೊಂಡಿದ್ದಾಳೆ. ಇದಲ್ಲದೆ, ವಿಮಾನಕ್ಕಾಗಿ ಪಾವತಿಸಿದ ಹಣವನ್ನು ಆತ ನೀಡುವಂತೆ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾಳೆ. ಆದರೆ, ನ್ಯಾಯಾಧೀಶರು, ಯುವತಿ ಹೇಳಿದ ಅಪರಾಧಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಾಗ್ದಾನವನ್ನು ಉಲ್ಲಂಘಿಸಿದ್ದಕ್ಕಾಗಿ ಯಾರನ್ನೂ ಶಿಕ್ಷಿಸುವುದು ಅಸಾಧ್ಯ ಎಂದು ತೀರ್ಪು ನೀಡಿದ್ದಾರೆ.
