ಬೆಂಗಳೂರು : ತಡರಾತ್ರಿ ಮೂವರು ಪುಂಡರು ಯುವತಿಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ.
ಯುವತಿ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಹೋಗುತ್ತಿದ್ದಳು. ಇತ್ತ ಒಂದೇ ಬೈಕ್‌ನಲ್ಲಿ ಬಂದು ಮೂವರು ಪುಂಡರು ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡಿದ್ದಾರೆ. ಪುಂಡರು ಹೆಲ್ಮೆಟ್ ಕೂಡ ಧರಿಸಿರಲಿಲ್ಲ, ಬೇಕು ಅಂತಾನೆ ಬೈಕ್ ಮುಂದೆ ಹೋಗಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾರೆ. ಸುಮಾರು ಎರಡು ಕಿಲೋ ಮೀಟರ್ ದೂರದವರೆಗೂ ಯುವತಿಯನ್ನ ಫಾಲೋ ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಯುವತಿಗೆ ಕಿರುಕುಳ ಕೊಡೋ ವಿಡಿಯೋವನ್ನು ಕಾರಿನಲ್ಲಿ ಹಿಂದೆ ಬರುತ್ತಿದ್ದ ವ್ಯಕ್ತಿ ಚಿತ್ರೀಕರಣ ಮಾಡಿದ್ದಾರೆ. ಬಳಿಕ ವಿಡಿಯೋ ಸಮೇತ ಪೊಲೀಸರಿಗೆ ಎಕ್ಸ್‌ನಲ್ಲಿ ಟ್ಯಾಕ್ ಮಾಡಿ, ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಸುದ್ದುಗುಂಟೆ ಪಾಳ್ಯ ಪೊಲೀಸರು ಉತ್ತರ ನೀಡಿದ್ದು, ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈಗಾಗಲೇ ಬೈಕ್ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಬೈರತಿ ಬಸವರಾಜ್ಗೆ ಬಿಗ್ ರಿಲೀಫ್.. ಬಂಧನದಿಂದ ಪಾರಾದ ಬಿಜೆಪಿ ಶಾಸಕ!


















