ಯುವತಿಯೊಬ್ಬಳು ತನ್ನ ಪ್ರೆಮಿಯನ್ನು ತುಂಡು ತುಂಡಾಗಿ ಕತ್ತರಿಸಿ ಆತನ ದೇಹದ ಅಂಗಗಳನ್ನು ಗೆಳತಿಯ ಮನೆಯಲ್ಲಿ ಹೂತಿಟ್ಟಿರುವ ಆಘಾತಕಾರಿ ಮತ್ತು ಭಯಾನಕ ಘಟನೆಯೊಂದು ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ. ಫತನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸುವಂಶ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವತಿ ತನ್ನ ಪತಿಯೊಂದಿಗೆ ಸೇರಿ ಆತನನ್ನು ಕೊಲೆ ಮಾಡಿದ್ದಾಳೆ. ನಂತರ ತನ್ನ ಸ್ನೇಹಿತೆಯ ಮನೆಯಲ್ಲಿ ಆತನ ಶವ ಹೂತಿದ್ದಾಳೆ.
ಮೃತ ಯುವಕ ಬಿಹಾರದ ನಿವಾಸಿ. ಹಲವು ದಿನಗಳಿಂದ ಆತನ ಸುಳಿವು ಸಿಗದಿದ್ದಾಗ ಆತನ ಕುಟುಂಬಸ್ಥರು ದೂರು ನೀಡಿದ್ದರು. ವಿನೋದ್ ಮತ್ತು ಅವರ ಪತ್ನಿ ಪುಷ್ಪಾ ಅವರು ಹರಿಯಾಣದ ಗುರುಗ್ರಾಮದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಬಿಹಾರದ ಮುನಿಯಾರಿ ಡ್ಯಾಂ ನಿವಾಸಿಯಾದ 45 ವರ್ಷದ ಶಿವನಾಥ್ ಎಂಬುವವರೊಂದಿಗೆ ಪುಷ್ಪಾ ಅಕ್ರಮ ಸಂಬಂಧ ಹೊಂದಿದ್ದಳು. ಆದರೆ, ಸ್ವಲ್ಪದರಲ್ಲೇ ಆಕೆಗೆ ಶಿವನಾಥನ ಸಂಬಂಧ ಬೇಡವಾಗಿದೆ. ಹೀಗಾಗಿ ಶಿವನಾಥನಿಂದ ದೂರವಾಗಲು ಬಯಸಿದ್ದಳು. ಶಿವನಾಥ್ ಮಾತ್ರ ಸಂಬಂಧ ಕೊನೆಗೊಳಿಸಲು ಮುಂದಾಗಿರಲಿಲ್ಲ. ಹೀಗಾಗಿ ಗಂಡನಿಗೆ ವಿಷಯ ತಿಳಿಸಿ, ನಂತರ ತನ್ನ ಸ್ನೇಹಿತೆ ಪೂನಂ ಮನೆಯಲ್ಲಿ ಭೇಟಿ ಮಾಡುವಂತೆ ಶಿವನಾಥ್ ಗೆ ತಿಳಿಸಿದ್ದಾಳೆ.
ಅಲ್ಲಿಗೆ ಬಂದ ಶಿವನಾಥನನ್ನು ಪತಿಯೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ನಂತರ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಪೂನಂ ಮನೆಯಲ್ಲಿ ಶವ ಹೂತು ಹಾಕಿದ್ದಾರೆ. ನಂತರ ವಿನೋದ್ ಮತ್ತು ಪುಷ್ಪಾ ಗುರುಗ್ರಾಮಕ್ಕೆ ತೆರಳಿದ್ದಾರೆ. ಇನ್ನೊಂದೆಡೆ ಬಿಹಾರ ಪೊಲೀಸರು ಸಿವನಾಥ್ ಗಾಗಿ ಹುಡುಕಾಟ ನಡೆಸಿದ್ದಾರೆ. ಪುಷ್ಪಾ ಜತೆ ನಿತ್ಯ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಅವಳು ಕೊನೆಯದಾಗಿ ಮಾತನಾಡಿದ ವ್ಯಕ್ತಿ ಪುಷ್ಪಾ ಆಗಿದ್ದರಿಂದ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ವಿಷಯ ಬೆಳಕಿಗೆ ಬಂದಿದೆ.