ಬೆಂಗಳೂರು: ಕಿರುತೆರೆ ನಟಿ (Serial Actress)ಯೊಂದಿಗೆ ಮದುವೆಯ ಕಿರಿಕ್ ಆದ ಕಾರಣಕ್ಕೆ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮದನ್ (25) ಸಾವನ್ನಪ್ಪಿದ ಯುವಕ. ಈತ ಇವೆಂಟ್ ಮ್ಯಾನೇಜ್ ಮೆಂಟ್ ನಲ್ಲಿ ಡೆಕೊರೇಟ್ ಕೆಲಸ ಮಾಡುತ್ತಿದ್ದ. ಕೆಲವು ಸಮಯದ ಹಿಂದಷ್ಟೇ ಕಿರುತೆರೆಯಲ್ಲಿ ಸಹನಟಿಯಾಗಿ ಕೆಲಸ ಮಾಡುತ್ತಿದ್ದ ವೀಣಾ (Actress veena) ಎಂಬ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ.
ಸೀರಿಯಲ್ ಸೆಟ್‌ನಲ್ಲೇ ಇಬ್ಬರು ಸ್ನೇಹಿತರಾಗಿದ್ದರು. ಸ್ನೇಹ ಮುಂದುವರೆಯುತ್ತಿದ್ದಂತೆ ಸಲುಗೆ ಬೆಳೆಸಿಕೊಂಡು ಇಬ್ಬರು ಲೀವಿಂಗ್ ರಿಲೇಶನ್ ಶಿಪ್ ನಲ್ಲಿ ಕೂಡ ಇದ್ದರು ಎನ್ನಲಾಗಿದೆ. ವೀಣಾ ಮದುವೆ ಆಗುವಂತೆ ಮದನ್ ನನ್ನು ಹಲವಾರು ಬಾರಿ ಒತ್ತಾಯ ಮಾಡಿದ್ದಾಳೆ. ಆದರೆ, ವೀಣಾ ಹಲವು ಹುಡುಗರೊಂದಿಗೆ ಸ್ನೇಹ ಬೆಳೆಸಿದ್ದಳು ಎಂಬ ಕಾರಣಕ್ಕೆ ಮದನ್ ಮದುವೆಗೆ ಒಪ್ಪಿಲ್ಲ ಎನ್ನಲಾಗಿತ್ತು.