ಹಾವೇರಿ: ನಗರದಲ್ಲೊಬ್ಬಾತ ಲೇಡಿಸ್ ಪಿಜೆಗೆ ನುಗ್ಗಿ ಲವ್ ಮಿ, ಲವ್ ಮಿ ಎಂದು ವಿಕೃತಿ ಮೆರೆದಿರುವ ಆರೋಪವೊಂದು ಕೇಳಿ ಬಂದಿದೆ.
ಹಾವೇರಿ ನಗರ ಭಾಗದಲ್ಲಿರುವ ಲೇಡಿಸ್ ಪಿಜಿಯಲ್ಲಿ ಈ ಘಟನೆ ನಡೆದಿದೆ. ಈ ವಿಕೃತ ಮನಸ್ಸಿನ ಯುವಕ ಹಾಡುಹಗಲೇ ಲೇಡಿಸ್ ಪಿಜಿ ಪ್ರವೇಶಿಸಿ, ಪ್ರೀತ್ಸೆ, ಪ್ರೀತ್ಸೆ ಎಂದು ರಂಪಾಟ ಮಾಡಿದ್ದಾನೆ ಎನ್ನಲಾಗಿದೆ.
ಕೈಮುಗಿತಿನಿ, ಕಾಲಿಗೆ ಬೀಳ್ತಿನಿ ಪ್ರೀತ್ಸೆ ಎಂದು ಯುವತಿಯ ಬೆನ್ನು ಬಿದ್ದಿದ್ದಾನೆ ಎನ್ನಲಾಗಿದೆ. ಈ ಪಾಗಲ್ ಪ್ರೇಮಿಯ ಕಾಟದಿಂದ ಬೇಸತ್ತ ಯುವತಿಯರು ವಿಡಿಯೋ ಮಾಡಿಕೊಂಡಿದ್ದಾರೆ. ಈ ರೀತಿ ವಿಕೃತಿ ಮೆರೆದ ಯುವಕನನ್ನು ಪ್ರಮೋದ್ ಶರಣಪ್ಪ ಎನ್ನಲಾಗಿದೆ.
ಈತನ ಪ್ರೀತಿಗೆ ಯುವತಿ ನಿರಾಕರಿಸಿದ್ದಕ್ಕೆ ಪಿಜಿಗೆ ಹೋಗಿ ಕಾಟ ಕೊಟ್ಟಿದ್ದಾನೆ ಎನ್ನಲಾಗಿದೆ. ಸದ್ಯ ಯುವಕನ ಹುಚ್ಚಾಟ ವೈರಲ್ ಆಗಿದೆ. ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.